ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಿಸಿಸಿ ಬ್ಯಾಂಕ್ ಚುನಾವಣೆ: ಜೆಡಿಎಸ್ ಮೇಲುಗೈ

Vishwanath S
Updated On : 16 Nov 2013, 12:55 pm

ಕೋಲಾರ: ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿರುವ ಐವರು ಜಯಗಳಿಸಿದ್ದಾರೆ.
ಒಟ್ಟು 15 ಸ್ಥಾನಗಳನ್ನು ಹೊಂದಿರುವ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದು ನ.15 ರಂದು ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಸಾಮಾನ್ಯ ಎ ವರ್ಗಕ್ಕೆ ಸೇರಿದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮತದಾನ ನಡೆದಿದ್ದರೂ ತಾಂತ್ರಿಕ ಕಾರಣಗಳಿಂದ ಫಲಿತಾಂಶ ಪ್ರಕಟಣೆ ಆಗಿಲ್ಲ. ಉಳಿದ 10 ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು ಜೆಡಿಎಸ್ ಬೆಂಬಲಿತರು 5, ಬಿಜೆಪಿಯ 3 ಹಾಗೂ ಕಾಂಗ್ರೆಸ್‌ನ ಇಬ್ಬರು ಆಯ್ಕೆಯಾಗಿದ್ದಾರೆ.
ಸಾಮಾನ್ಯ ಎ ವರ್ಗಕ್ಕೆ ಸೇರಿದ ಮಾಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಿಕ್ಕತಿರುಪತಿಯ ಎನ್. ಶಂಕರನಾರಾಯಣರೆಡ್ಡಿ(4) ಮಾಲೂರಿನ ಆರ್. ಪ್ರಭಾಕರ್(3), ದೊಡ್ಡಶಿವಾರದ ಎಸ್.ಪಿ. ಗೋಪಾಲ್(3)ಅವರನ್ನು ಕೇವಲ 1 ಮತದಿಂದ ಸೋಲಿಸಿದ್ದಾರೆ.
ಬಂಗಾರಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ಸೋರೇಗೌಡನಕೋಟೆಯ ಎಂ. ಕೃಷ್ಣೇಗೌಡ(4) ಅವರು ದೊಡ್ಡಕಲ್ಲಹಳ್ಳಿಯ ಆರ್. ನಾರಾಯಣರೆಡ್ಡಿ(3)ಯವರನ್ನು 1 ಮತದಿಂದ ಸೋಲಿಸಿ ಆಯ್ಕೆಯಾಗಿದ್ದಾರೆ. ಚಿಂತಾಮಣಿ ಕ್ಷೇತ್ರದಿಂದ ಚಿಂತಾಮಣಿಯ ಹಿರಿಯ ಬಿಜೆಪಿ ಮುಖಂಡ ಸತ್ಯನಾರಾಯಣ ಮಹೇಶ್(8)ಕುರುಬೂರು ಕೆ.ಎ. ವಿಶ್ವನಾಥಶರ್ಮ (4) ಅವರನ್ನು 4 ಮತಗಳಿಂದ ಪರಾಭವಗೊಳಿಸಿದ್ದಾರೆ.
ಶಿಡ್ಲಘಟ್ಟ ಮತ ಕ್ಷೇತ್ರದಿಂದ ಜೆಡಿಎಸ್‌ನ ಪಿ. ಶಿವಾರೆಡ್ಡಿ(4) ಮತಗಳನ್ನು ಪಡೆದರೆ ಶಿಡ್ಲಘಟ್ಟ ತಾಲೂಕಿನ ಯಣ್ಣಂಗೂರು ಗ್ರಾಮದ ಅಶ್ವತ್ಥನಾರಾಯಣಗೌಡ (2) ಮತಗಳನ್ನು ಪಡೆದಿದ್ದಾರೆ.
ಗುಡಿಬಂಡೆಯ ಕಾಂಗ್ರೆಸ್ ಮುಖಂಡ ಎಚ್.ನರಸಿಂಹರೆಡ್ಡಿ(3)ಅವರು ದಿನ್ನಹಳ್ಳಿಯ ಡಿ.ಪಿ. ನಾಗರಾಜ್(2) ಅವರನ್ನು ಕೇವಲ 1 ಮತದಿಂದ ಸೋಲಿಸಿದ್ದಾರೆ. ಗೌರಿಬಿದನೂರಿನ ಮತ ಕ್ಷೇತ್ರದಿಂದ ಬಿಜೆಪಿಯ ಜರಬಂಡಹಳ್ಳಿಯ ಜಿ.ವಿ. ಹನುಮಂತೇಗೌಡ (17) ಅವರು ಮರಳೂರು ಗ್ರಾಮದ ಹನುಮಂತರೆಡ್ಡಿ(12)  ಅವರನ್ನು 5 ಮತಗಳ ಅಂತರದಿಂದ ಮಣಿಸಿದ್ದಾರೆ.
ಸಾಮಾನ್ಯ ಬಿ. ವರ್ಗದ ಫಲಿತಾಂಶ: ಹಿರಿಯ ಸಹಕಾರಿ ಹಾಗೂ ಕೋಲಾರ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ (102) ಅವರು ಸಾಮಾನ್ಯ ಡಿ ವರ್ಗಕ್ಕೆ ಸೇರಿದ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಸ್ಪರ್ಧಿಸಿ ಜೆಡಿಎಸ್‌ನವರೇ ಆದ ಶ್ರೀನಿವಾಸಪುರ ತಾಲೂಕಿನ ಪುರಹಳ್ಳಿ ಪಿ.ಜಿ. ವೆಂಕಟರೆಡ್ಡಿ(64)ಯವರನ್ನು 38 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸಾಮಾನ್ಯ ಬಿ. ವರ್ಗಕ್ಕೆ ಸೇರಿದ ಟಿಎಪಿಸಿಎಂಸ್ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ನಾಗನಾಳ ಸೋಮಣ್ಣ (5) ಅದೇ ಪಕ್ಷದವರಾದ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದ ಆರ್. ಚಂದ್ರಶೇಖರ್(4) ಅವರನ್ನು ಕೇವಲ 1 ಮತದ ಅಂತರದಿಂದ ಪರಾಭವಗೊಳಿಸಿದ್ದಾರೆ.
ಸಾಮಾನ್ಯ ಬಿ ಮತ್ತು ಇ ವರ್ಗಕ್ಕೆ ಸೇರಿದ ಇತರ ಸಹಕಾರ ಸಂಘಗಳಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮುಖಂಡ ಮುಳಬಾಗಿಲು ತಾಲೂಕಿನ ಮೇಲಾಗಣಿ ಗ್ರಾಮದ ಎಂ.ಸಿ. ನೀಲಕಂಠೇಗೌಡ(30) ಅವರು ಕೋಲಾರ ತಾಲೂಕಿನ ಕಾಮದೇನಹಳ್ಳಿಯ ಸೊಣ್ಣೇಗೌಡ(20)ಅವರನ್ನು 10 ಮತಗಳಿಂದ ಸೋಲಿಸಿದ್ದರೆ, ಬಿಜೆಪಿಯ ತಲಗುಂದ ನರಸಿಂಹರಾಜು ಕೇವಲ 4 ಮತಗಳಿಗೆ ತೃಪ್ತರಾಗಿದ್ದಾರೆ.
ಸಾಮಾನ್ಯ ಬಿ ವರ್ಗದ ಚಿಕ್ಕಬಳ್ಳಾಪುರ ಜಿಲ್ಲೆಯ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿಡ್ಲಘಟ್ಟ ತಾಲೂಕಿನ ಜೆಡಿಎಸ್ ಬೆಂಬಲಿತ ಆನೂರು ಪಿ.ವಿ. ನಾಗರಾಜ್(95)ಅವರು ಚಿಕ್ಕಬಳ್ಳಾಪುರ ತಾಲೂಕಿನ ಬೊಮ್ಮನಹಳ್ಳಿಯ ಬಿ.ಎಂ. ರಾಮಸ್ವಾಮಿ(86) ಅವರನ್ನು 9 ಮತಗಳಿಂದ ಸೋಲಿಸಿದ್ದಾರೆ. ಸಾಮಾನ್ಯ ಬಿ ವರ್ಗದಿಂದ ಜೆಡಿಎಸ್‌ನ ಮೂವರು ಹಾಗೂ ಕಾಂಗ್ರೆಸ್‌ನಿಂದ ಒಬ್ಬರು ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾಯಿತರಾಗಿದ್ದಾರೆ.
ಫಲಿತಾಂಶಕ್ಕೆ ತಡೆ: ಸಾಮಾನ್ಯ ಎ ವರ್ಗಕ್ಕೆ ಸೇರಿದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನ.15 ರಂದು ಚುನಾವಣೆ ನಡೆಯಿತಾದರೂ ತಾಂತ್ರಿಕ ಕಾರಣಗಳಿಂದ ಮತ ಏಣಿಕೆಗೆ ತಡೆಯಾಜ್‌ಞೆ ನೀಡಲಾಗಿದೆ.
ಈ ಕ್ಷೇತ್ರದಿಂದ ಆರೂರು ಮಂಜುನಾಥ್, ನಂದಿ ಜಿ.ಆರ್. ಶ್ರೀನಿವಾಸ್ ಹಾಗೂ ಗೊರಮಿಲ್ಲಹಳ್ಲಿಯ ಜಿ.ವಿ. ಶ್ರೀರಾಮರೆಡ್ಡಿ ಸ್ಪರ್ಧಿಸಿದ್ದಾರೆ. ಒಟ್ಟು 12 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಅವಿರೋಧವಾಗಿ ಆಯ್ಕೆಯಾಗಿರುವವರು: ಸಾಮಾನ್ಯ ಎ ವರ್ಗದಲ್ಲಿ ಕೋಲಾರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ಜೆಡಿಎಸ್‌ನ ಕೆ.ವಿ. ದಯಾನಂದ, ಮುಳಬಾಗಿಲು ತಾಲೂಕಿನ ಪಿಸಿಆರ್‌ಡಿ ಬ್ಯಾಂಕಿನಿಂದ ಹಿರಿಯ ವಕೀಲ ಹಾಗೂ ಜೆಡಿಎಸ್ ಮುಖಂಡರಾದ ಕೆ.ವಿ. ಶಂಕರಪ್ಪ, ಶ್ರೀನಿವಾಸಪುರ ತಾಲೂಕಿನ ಪಿಸಿಆರ್‌ಡಿ ಬ್ಯಾಂಕಿನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮಣಿಗಾನಹಳ್ಳಿಯ ಎಂ. ವೆಂಕಟರೆಡ್ಡಿ ಹಾಗೂ ಬಾಗೇಪಲ್ಲಿ ತಾಲೂಕಿನ ಪಿಸಿಆರ್‌ಡಿ ಬ್ಯಾಂಕಿನಿಂದ ಸ್ಪರ್ಧಿಸಿದ್ದ ಕೊತ್ತಕೋಟೆಯ ಸ್ವತಂತ್ರ ಅಭ್ಯರ್ಥಿ ಎಚ್.ವಿ. ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮತದಾನ ಶುಕ್ರವಾರ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಶಾಂತಿಯುತವಾಗಿ ನಡೆದಿತ್ತು. ಮತ  ಎಣಿಕೆ ಕಾರ್ಯ ಸಂಜೆ ಚುನಾವಣಾಧಿಕಾರಿಯೂ ಆಗಿರುವ ಕೋಲಾರ ಉಪ ವಿಭಾಗಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಜರುಗಿತು.



-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement