ರಾಮೇಗೌಡ ಬಿಜೆಪಿ ಸೇರ್ಪಡೆ
ಮಾಲೂರು: ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಪಕ್ಷದ ಸಿದ್ಧಾಂತ ಒಪ್ಪಿ ಬಿಜೆಪಿ ಸೇರಿರುವುದಾಗಿ ಜಿಪಂ ಮಾಜಿ ಸದಸ್ಯ ಜಿ.ಇ. ರಾಮೇಗೌಡ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಬಿಜೆಪಿ ಶುಕ್ರವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸೊ. ವೆಂಕಟೇಶ್ ಅವರಿಂದ ಪಕ್ಷದ ಧ್ವಜ ಸ್ವೀಕರಿಸಿ ಮಾತನಾಡಿ, ದೇಶದಲ್ಲಿ ಕಾಡುತ್ತಿರುವ ನಿರೋದ್ಯೋಗ ಸಮಸ್ಯೆ, ಬಡತನ ಹೋಗಲಾಡಿಸುವಿಕೆ ಬಗ್ಗೆ ನರೇಂದ್ರ ಮೋದಿ ಹೊಂದಿರುವ ವಿಷನ್ ಯುವಕರನ್ನು ಪಕ್ಷದಡೆಗೆ ಸೆಳೆಯುತ್ತಿದೆ.
ದೇಶ ಮೊದಲು ಎನ್ನುವ ಬಿಜೆಪಿ ಪಕ್ಷವೂಂದೇ ದೇಶದ ಭವಿಷ್ಯವಾಗಿರುವುದರಿಂದ ಪಕ್ಷಕ್ಕೆ ಬಂದಿದ್ದು, ತಾಲೂಕಿನ ಪ್ರತಿ ಗ್ರಾಮದಲ್ಲೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷವನ್ನು ಸಂಘಟಿಸುವುದಾಗಿ ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಮಾಡುವ ಕಡೆ ಪಕ್ಷ ಸಂಘಟಿತವಾಗುತ್ತಿದ್ದು, ಮತದಾರರ ಒಲವು ಸಹಕಾರಿಯಾಗುತ್ತಿದೆ ಎಂದರು.
ರಾಮೇಗೌಡರ ಜತೆಯಲ್ಲಿ ಪುರಸಭೆ ಪಕ್ಷೇತರ ಸದಸ್ಯೆ ಸೂಲೋಚನಾ, ಗ್ರಾಪಂ ಸದಸ್ಯ ಜ್ಯೋನ್ನಪ್ಪ, ಭುವನಹಳ್ಳಿ ಚಿನ್ನಪ್ಪ, ದಿನೇಶ್‌ಗೌಡ, ಟೇಕಲ್ ಶ್ರೀರಾಮುಲು, ರಘು, ಮಾಸ್ತಿ ರಾಮಮೂರ್ತಿ, ಭೈರ್ನಹಳ್ಳಿ ರವೀಂದ್ರ, ಡಿ.ಕೆ. ಶಂಕರ್, ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ಬಾಲೂ, ಮಲ್ಲೇಶ್, ಕಲ್ಕರೆ ನಂದನಗೌಡ, ಚಲಪತಿ, ಸಂದೀಪ್, ಜಗದೇನಹಳ್ಳಿ ವೆಂಕಟೇಶ್, ಶಾಂತಮ್ಮ, ಶಾರದಮ್ಮ, ನಾಗರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.