ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ನಾತಕೋತ್ತರ ಕೇಂದ್ರಕ್ಕೆ ಎಂಎಲ್ಸಿ ವೀರಯ್ಯ ಭೇಟಿ

Vishwanath S
Updated On : 16 Nov 2013, 12:58 pm

ಕೋಲಾರ: ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯನವರು ಶುಕ್ರವಾರ ತಾಲೂಕಿನ ಮಂಗಸಂದ್ರದಲ್ಲಿರುವ ಬೆಂಗಳೂರು ವಿವಿಗೆ ಸೇರಿದ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಟಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ನಾತಕೋತ್ತರ ಕೇಂದ್ರ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಕೇಂದ್ರದಲ್ಲಿ ವಿದ್ಯುತ್, ನೀರು, ತರಗತಿ ಕೊಠಡಿಗಳ ಕೊರತೆ ಇದೆ ಎಂದು ವಿಧಾನ ಪರಿಷತ್ತಿನ ಸದಸ್ಯರ ಗಮನಕ್ಕೆ ತಂದರು. ಸ್ನಾತಕೋತ್ತರ ಕೇಂದ್ರ ನಿರ್ಮಾಣಕ್ಕೆ ಸುಮಾರು 8 ಕೋಟಿ ರು. ಗಳ ವೆಚ್ಚದಲ್ಲಿ ನಿರ್ಮಿಸಕೇದಾಗ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಸ್ಥಗಿತಗೊಳಿಸಲಾಗಿದೆ. ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಚಿರತೆ ಹಾವಳಿ ಹೆಚ್ಚಾಗಿರುವುದರಿಂದ ಭಯ ಭೀತರಾಗಿದ್ದೇವೆಂದು ತಿಳಿಸಿದರು. ಸ್ನಾತಕೋತ್ತರ ಕೇಂದ್ರದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ನೀಡಿದ ದೂರು ಅಲಿಸಿದ ಡಿ.ಎಸ್. ವೀರಯ್ಯ ತಕ್ಷಣ ಬೆಂಗಳೂರು ವಿವಿಯ ಕುಲಪತಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಾಕಿ ಕಾಮಗಾರಿಗಳನ್ನು ಬೇಗನೆ ಮುಗಿಸಿಕೊಡುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂಧಿಸಿದ ಕುಲಪತಿಗಳು ತಾವೇ ಖುದ್ಧಾಗಿ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ನಾಗಭೂಷಣ್, ವಕೀಲರಾದ ಆರ್.ಎನ್. ಹನುಮಂತಪ್ಪ, ಜಿ. ವೆಂಕಟಾಚಲಪತಿ, ರಂಗಾರೆಡ್ಡಿ, ರವಿ ಇದ್ದರು.
ಮಕ್ಕಳ ಪ್ರವಾಸ ಮುಗಿಸಲು ಸೂಚನೆ
ಮುಳಬಾಗಲು: ಸರ್ಕಾರಿ ಮತ್ತು ಪ್ರೌಢಶಾಲೆಗಳಲ್ಲಿ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸ ಅಥವಾ ಹೊರ ಸಂಚಾರ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪಾಲಕರ ಅರ್ಥಿಕ ಸ್ಥಿತಿಗನುಗುಣವಾಗಿ ನ.30ರೊಳಗೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ದೇವರಾಜ್ ಸೂಚಿಸಿದ್ದಾರೆ. ಡಿಸೆಂಬರ್‌ನಲ್ಲಿ ಶಾಲಾ ವಾರ್ಷಿಕೋತ್ಸವದ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು, ತರಗತಿಗಳಿಗೆ ತೊಂದರೆಯಾಗದಂತೆ ಹೆಚ್ಚುವರಿ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ತರಬೇತಿ ಮಾಡಿಕೊಳ್ಳಬೇಕು. ಜನವರಿ 14ರೊಳಗೆ ಕಾರ್ಯಕ್ರದ ವರದಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗೆ ನೀಡಬೇಕು.ಪ್ರವಾಸ ಮತ್ತು ವಾರ್ಷಿಕೋತ್ಸವದಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮಗಳು ನೈಜ್ಯತೆಯಿಂದ ಕೂಡಿರಬೇಕು ಎಂದು ಆದೇಶಿಸಿದ್ದಾರೆ.
ಮಕ್ಕಳ ಸಮೀಕ್ಷೆ
ಮುಳಬಾಗಲು: ಪ್ರಸಕ್ತ ಸಾಲಿನಲ್ಲಿ 6ರಿಂದ 16 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆನಡೆಯುತ್ತಿದೆ. ನ.6ರಿಂದ 13ರವರೆವಿಗೂ ಸಮೀಕ್ಷೆ ನಡೆದಿದ್ದು, ಶಿಕ್ಷಕರು, ಬಿಆರ್ಸಿ ಮತ್ತು ಸಿಆರ್ಸಿ ಗಳು ಕಾರ್ಯನಿರ್ವಹಿಸಿದ್ದಾರೆ.
ಶ್ರದ್ಧಾಂಜಲಿ ಕಾರ್ಯಕ್ರಮ
ಮುಳಬಾಗಲು: ಪಟ್ಟಣದ ವೀರಭದ್ರ ನಗರದ ಹರಿದಾಸ ಪೀಠದಲ್ಲಿ ನ.17ರಂದು ಸಂತ ಭದ್ರಗಿರಿ ಅಚ್ಯುತ ದಾಸರು ಮತ್ತು ಶಾರದಮ್ಮ ರವರಿಗೆ ಭಾವಪೂರ್ವ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಜ್ಯ ಪುರಂದರ ಆರಾಧನ ಸಮಿತಿ ಕಾರ್ಯದರ್ಶಿ ಎನ್. ರಾಜರಾವ್ ತಿಳಿಸಿದ್ದಾರೆ.
ಕ್ರಮಕ್ಕೆ ಆಗ್ರಹ
ಶಿರಾ: ಆಂಧ್ರ ಗಡಿ ಭಾಗದ ಗಾಯಿತ್ರಿ ಕಾಲೋನಿ ಹಾಗೂ ಮಧುಗಿರಿ ತಾಲೂಕು ಗಡಿ ಭಾಗದ ಬಸವನಹಳ್ಳಿ ಕೆರೆ ಮೇಲ್ಭಾಗದ ನೀಲಗಿರಿ ಅರಣ್ಯ ಮತ್ತು ಶಿರಾ ತಾಲೂಕು ಗಡಿ ಭಾಗವಾಗಿ ಕೇಂದ್ರ ಬಿಂದುವಾಗಿರುವ ಅರಣ್ಯದಲ್ಲಿ ಆಂಧ್ರ ಮೂಲದ ವ್ಯಕ್ತಿಯೊಬ್ಬರು ಗುಡಾರ ಹಾಕಿಕೊಂಡು  ಜೂಜಾಟ ನಡೆಸುತ್ತಿದ್ದು ಈ ಜೂಜಾಟವನ್ನು  ಅಂತ್ಯಗೊಳಿಸಬೇಕೆಂದು ರಾಜ್ಯ ಮಾದಿಗ ದಂಡೋರ ಸಮಿತಿ ಕಾರ್ಯಾಧ್ಯಕ್ಷ ಮಾಗೋಡು ಯೋಗಾನಂದ್ ತಿಳಿಸಿದ್ದಾರೆ.  ಸದರಿ ವ್ಯಕ್ತಿ ಯಾರ ಕೈಲೂ ಈ ಜೂಜಾಟವನ್ನು ನಿಲ್ಲಿಸುವುದಕ್ಕೆ ಆಗುವುದಿಲ್ಲ ಎಂದು ಅಕ್ಕಪಕ್ಕದವರೊಡನೆ ಸಂಭಾಷಣೆ ಮಾಡುತ್ತಿದ್ದು ಈತನ ಬಗ್ಗೆ ಕ್ರಮ ಜರುಗಿಸಿ ಆ ಪ್ರದೇಶದಲ್ಲಿ ಶಾಂತಿ ಕಾಪಾಡಬೇಕೆಂದು ಯೋಗಾನಂದ್ ತಿಳಿಸಿದ್ದಾರೆ.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ
ಮಾಲೂರು: ಗ್ರಂಥಾಲಯವನ್ನು ವಿದ್ಯಾರ್ಥಿಗಳು ವ್ಯಾಂಸಗ ಕಾಲದಲ್ಲಿ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ಹೇಳಿದರು. ಪಟ್ಟಣದ ಸರ್ಕಾರಿ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಂಥಾಲಯದಲ್ಲಿ ಬಹಳಷ್ಟು ಪುಸ್ತಕಗಳು ಸಿಗುತ್ತಿದ್ದು, ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದು ಎಂದರು. ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂ. ಚಂದ್ರಪ್ಪ, ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ಪುರಸಭೆ ಅಭಿಯಂತರೆ ಭಾನುಮತಿ, ಗ್ರಂಥಾಲಯ ಸಿಬ್ಬಂದಿ ದಯಾನಂದ್ ಇದ್ದರು.
ಕಾರ್ಯಕ್ರಮದ ಜಾಗೃತಿಗಾಗಿ ಪಂಜಿನ ಮೆರವಣಿಗೆ
ಗೌರಿಬಿದನೂರು: ಭಾರತೀಯ ಜನತಾ ಪಾರ್ಟಿಯ ತಾಲೂಕು ಯುವ ಮೋರ್ಚಾ ಘಟಕದ ವತಿಯಿಂದ ಪಟ್ಟಣದ ರಾಜ ಬೀದಿಗಳಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಂಡಿತ್ತು. ನವೆಂಬರ್ 17ರಂದು ಬೆಂಗಳೂರಿನಲ್ಲಿ ನಡೆಯುವ ಭಾರತವನ್ನು ಉಳಿಸಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಕಾರ್ಯಕ್ರಮಕ್ಕೆ ಜನಜಾಗೃತಿ ಮೂಡಿಸಲು ಯುವಮೋರ್ಚಾ ಘಟಕದ ಪಂಜಿನ ಮೆರವಣಿಗೆಯ ನಡೆಸಿ ಮೆರವಣಿಗೆಯನ್ನು ಉದ್ದೇಶಿಸಿ ಪ್ರಧಾನ ಕಾರ್ಯದರ್ಶಿ ರಮೇಶ್‌ರಾವ್ ಮಾತನಾಡುತ್ತ ಅಂದು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಲು ಸಾವಿರಾರು ಯುವಕರು ಪ್ರಾಣತೆತ್ತರು ಇಂದು ಭ್ರಷ್ಟ ಕಾಂಗ್ರೇಸ್ ಆಡಳಿತದಿಂದ ಕಿತ್ತೊಗೆಯಲು ಲಕ್ಷಲಕ್ಷ ಯುವಕರು ಮುಂದೆ ಬರಬೇಕಿದೆ. ಬಿಜೆಪಿಯ ಸರ್ಕಾರವನ್ನು ಗೆಲ್ಲಿಸಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಇಂದಿನ ಯುವಕರು ಮುಂದೆ ಬರಬೇಕೆಂದು ಕರೆಯಿತ್ತರು. ಮೆರವಣಿಗೆಯಲ್ಲಿ ಜಿಲ್ಲಾ ಯುವ ಮೋರ್ಚಾಅಧ್ಯಕ್ಷ ಮಂಜುನಾಥ್, ಅಶ್ವತ್ಥ್, ಪ್ರದೀಪ್, ಹಾಜರಿದ್ದರು.
ಆಟದ ಮೈದಾನ ಅಭಿವೃದ್ಧಿಗೆ ಚಾಲನೆ
ಟೇಕಲ್: ಮಕ್ಕಳ ದಿನಾಚರಣೆ ಅಂಗವಾಗಿ ಟೇಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ ಕೆ.ಜಿ. ಹಳ್ಳಿ ಗ್ರಾಪಂನಿಂದ ನರೇಗಾ ಯೋಜನೆಯಡಿ ಮಕ್ಕಳಿಗಾಗಿ ಆಟದ ಮೈದಾನ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗಿದೆ. ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಪಂನುಂದ 5ಲಕ್ಷ ರುಪಾಯಿ ಅನುದಾನದಲ್ಲಿ ಮಕ್ಕಳ ಆಟದ ಮೈದಾನ ಅಭಿವೃದ್ಧಿಪಡಿಸುವದಾಗಿ ತಿಳಿಸಿದರು. ತಾಪಂ ಸದಸ್ಯೆ ಮಂಜುಳ ವೆಂಕಟೇಶ್, ಮ್ಯಾನೇಜರ್ ಕುಮಾರಿ ಭಾನು, ಕೆ.ಜಿ. ಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್.ಜಿ. ಗೋವಿಂದೆಗೌಡ, ನೂಟವೆ ಪಿಡಿಒ ಕೃಷ್ಣಪ್ಪ, ಕೆ.ಜಿ. ಹಳ್ಳಿ ಗ್ರಾಪಂ ಸದಸ್ಯ ಮಂಜುನಾಥ್, ಪ್ರಾಂಶುಪಾಲ ಎ.ಕೆ. ಪಾಪಣ್ಣ ಇದ್ದರು.
ಕಾನೂನು ಅರಿವು ನೆರವು ಕಾರ್ಯಕ್ರಮ
ಶಿಡ್ಲಘಟ್ಟ: ಮಕ್ಕಳ ದಿನಾಚರಣೆ ಅಂಗವಾಗಿ ತಾಲೂಕು ಸೇವಾ ಸಮಿತಿಯಿಂದ ಮೊರಾರ್ಜಿ ವಸತಿ ಶಾಲೆ 11 ಮೈಲಿ ಕ್ರಾಸ್ ಬಳಿ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಸಿ ನೆಡುವ ಮೂಲಕ ಪ್ರಧಾನ ಸಿವಿಲ್‌ನ್ಯಾಯಾಧೀಶರಾದ ಎಸ್. ಮಹೇಶ್ ಉದ್ಘಾಟಿಸಿ ಮಾತನಾಡಿ, ಕಾನೂನು ಗೌರವಿಸಿದರೆ ಕಾನೂನು ನಿಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು. ವಕೀಲ ರವೀಮದ್ರನಾಥ್, ಮಾಹಿತಿ ಹಕ್ಕು ಅದಿನಿಯಮದ ಬಗ್ಗೆ ತಿಳಿಸಿದರಿ. ವಕೀಲೆ ನವ್ತಾಜ್, ಭ್ರೂಣ ಹತ್ಯೆ ನಿಷೇದ ಕಾಯ್ದೆ ಬಗ್ಗೆ ತಿಳಿಸಿದರು. ತಾಲೂಕು ದಂಡಾಧಿಕಾರಿ ನಾರಾಯಣಸ್ವಾಮಿ, ಹಿರಿಯ ವಕೀಲ ಇ. ನಾರಾಯಣಪ್ಪ, ಡಿ.ಎ. ಅಶ್ವತ್ತನಾರಾಯಣ, ಪ್ರಾಂಶುಪಾಲ ಕುಬ್ರ ಮುಬೀನ್ ಇದ್ದರು.
ಯಡಿಯೂರಪ್ಪ ಹೋರಾಟ ಬೆಂಬಲಿಸಿ ಬೆಂಗಳೂರು ಚಲೋ
ಚಿಂತಾಮಣಿ: ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ಬಡಜನರಿಗೂ ವಿಸ್ತರಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಲು 23 ರಂದು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಸಾವಿರಾರು ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಕೆಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಡಿ.ಆರ್. ಶಿವಕುಮಾರಗೌಡ ತಿಳಿಸಿದ್ದಾರೆ. ತಾಲೂಕಿನ ಏನಿಗದಲೆ ಗ್ರಾಮದ ಕೆಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಕಾರ್ಯಕ್ರಮದ ರೂಪುರೇಷಗಳ ಬಗ್ಗೆ ವಿವರಿಸಿದರು. ಎಲ್ಲಾ ಬಡ ಜನರಿಗೆ ಶಾದಿಭಾಗ್ಯ ಯೋಜನೆಗೆ ತರಲು ಒತ್ತಾಯಿಸಿ ಯಡಿಯೂರಪ್ಪ ಹೋರಾಟ ಬೆಂಬಲಿಸಿ 23 ರಂದು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸಾವಿರಾರು ಜನರು  ಭಾಗವಹಿಸಲಿರುವುದಾಗಿ ಹೇಳಿದರು.
ದೇಣಿಗೆ ಬಗ್ಗೆ ಮಾಹಿತಿ ನೀಡಲು ಒತ್ತಾಯ
ಚಿಂತಾಮಣಿ: ತುರ್ತು ಪರಿಸ್ಥಿತಿಯಲ್ಲಿ ಅನುಕೂಲಕ್ಕಾಗಿ ಆ್ಯಂಬುಲೆನ್ಸ್ ವಾಹನಕ್ಕಾಗಿ ನಾರಾಯಣಪ್ಪ ನೀಡಿದ ದೇಣಿಗೆ ಬಗ್ಗೆ ಮಾಹಿತಿ ನೀಡದ ಮುಖಂಡರ ವಿರುದ್ಧ ಜಿಲ್ಲಾ ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಡಾ. ಶಿವಣ್ಣ ಅಸಮದಾನ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಮಸಲಹಳ್ಳಿ ಗ್ರಾಮದ ವಕ್ಕಲಿಗ ಸಮುದಾಯದ ತಿಪ್ಪನ್ನಗಾರಿ ನಾರಾಯಣಪ್ಪ ಎಂಬವರು ಕೋನಪ್ಪಲ್ಲಿ ಗೇಟ್ ಬಳಿ ನಡೆದ ವಕ್ಕಲಿಗ ಸಮಾವೇಶದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಉಪಯೋಗವಾಗಲು ಎಂದು ನಾರಾಯಣಪ್ಪ ಕುರಿಗಳನ್ನು ಮಾರಿ ರು. 1,001 ದೇಣಿಗೆ ನೀಡಿದ್ದಾರೆ. ಆದರೆ ಈವರೆಗೂ ದೇಣಿಗೆ ಹಣದ ಬಗ್ಗೆ ನಿಖರವಾದ ಮಾಹಿತಿ ದೊರೆಯದಿರುವ ಬಗ್ಗೆ ನಾರಾಯಣಪ್ಪ ಡಾ. ಶಿವಣ್ಣನವರ ಬಳಿ ಅಳಲನ್ನು ತೋಡಿಕೊಂಡಿದ್ದಾರೆ. ಇದರಿಂದ ದೇಣಿಗೆ ಹಣದ ಬಗ್ಗೆ ಉತ್ತರಿಸಬೇಕೆಂದು ಜಿಲ್ಲಾ ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಡಾ. ಶಿವಣ್ಣ ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.
ಗ್ರಾಮಗಳ ಅಭಿವೃದ್ಧಿಗಾಗಿ ಕೃಷ್ಣ ಬ್ಯಾಂಕ್ ಯೋಜನೆ
ಶಿಡ್ಲಘಟ್ಟ: ಪ್ರಗತಿ ಕೃಷ್ಣ ಬ್ಯಾಂಕ್ ಜಿಲ್ಲೆಯಲ್ಲಿ ಹನ್ನೊಂದು ಗ್ರಾಮಗಳನ್ನು ಆಯ್ಕೆ ಮಾಡಿ ಅವುಗಳ ಸರ್ವತೋಮುಖ ಅಭಿವೃದ್ಧಿಗಾಗಿ ಯೋಜನೆ ರೂಪಿಸಿರುವುದಾಗಿ ಪ್ರಗತಿ ಕೃಷ್ಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ರವೀಂದ್ರ ತಿಳಿಸಿದರು. ತಾಲೂಕಿನ ಗೊರಮಡುಗು ಗ್ರಾಮದಲ್ಲಿ ಬುಧವಾರ ಸ್ತ್ರೀ ಶಕ್ತಿ ಹಾಗೂ ಜೆಎಲ್‌ಜಿ ಗುಂಪುಗಳಿಗೆ ಸಾಲ ವಿತರಿಸಿ ಮಾತನಾಡಿ, ಗೊರಮಡುಗು ಗ್ರಾಮದಲ್ಲಿ ಸಮೀಕ್ಷೆ ಮುಗಿದಿದ್ದು ಗ್ರಾಮದ ರೈತರಿಗೆ, ಸ್ತ್ರೀ ಶಕ್ತಿ ಹಾಗೂ ಜೆಎಲ್‌ಜಿ ಗುಂಪುಗಳಿಗೆ ಸಾಲ ನೀಡುತ್ತಿರುವುದಾಗಿ ತಿಳಿಸಿದರು. ಬ್ಯಾಂಕಿನ ವ್ಯವಸ್ಥಾಪಕ ಸಿ. ವೆಂಕಟರಮಣಪ್ಪ ಮಾತನಾಡಿದರು. ದೇವರಾಜ್, ನಾರಾಯಣಸ್ವಾಮಿ, ರಾಮಾಂಜಿ, ಬ್ಯಾಂಕಿನ ಸಿಬ್ಬಂದಿ ಬಿ.ಆರ್. ನಟರಾಜ್, ವಿಶ್ವನಾಥ್, ಆರಾಧ್ಯ ಇದ್ದರು.
ಪದಾಧಿಕಾರಿಗಳ ಆಯ್ಕೆ
ಗುಡಿಬಂಡೆ: ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ಮ.ಗ. ಹೆಗಡೆ ಅವರ ಸಮ್ಮುಖದಲ್ಲಿ ಸಿರಿಗನ್ನಡ ವೇದಿಕೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪಟ್ಟಣದ ವಾಹಿನಿ ಅಭಿವೃದ್ಧಿ ಸಂಸ್ಥೆ ಕಚೇರಿ ಆವರಣದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ವೇದಿಕೆ ಗೌರವಾಧ್ಯಕ್ಷರಾಗಿ ರಫಿಕ್ ಗುಡಿಬಂಡೆ, ಉಪಾಧ್ಯಕ್ಷ ವಿ. ಗಂಗಾಧರ್, ಪ್ರಧಾನ ಕಾರ್ಯದರ್ಶಿ  ಫಯಾಜ್ ಅಹ್ಮದ್, ಕಾರ್ಯದರ್ಶಿ ರಾಘವೇಂದ್ರ ಭಟ್, ಸಹ ಕಾರ್ಯದರ್ಶಿ ತಿಮ್ಮಾರೆಡ್ಡಿ, ಸಂಘಟನಾ ಕಾರ್ಯದರ್ಶಿ ಎನ್. ಸದಾಶಿವಾರೆಡ್ಡಿ, ಖಜಾಂಚಿ  ಜಿ.ಟಿ. ಸವಿತಾ, ರಾಜ್ಯ ಸಮಿತಿ ಸದಸ್ಯ ಎನ್. ರಾಮಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯ ಸ. ನ. ನಾಗೇಂದ್ರ, ನಂಜರೆಡ್ಡಿ, ವಿ. ರಾಜಶೇಖರ್, ಆರ್. ಬಾಲಾಜಿ, ವಾಹಿನಿ ಸುರೇಶ್, ಆರ್. ವೆಂಕಟಾಚಲಯ್ಯ, ಸಿ.ಎ. ಚಲಪತಿ ಆಯ್ಕೆಯಾಗಿದ್ದಾರೆ ಎಂದು ಮ.ಗ. ಹೆಗಡೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement