ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಾ. ರಾವ್‌ಗೆ ಭಾರತ ರತ್ನ: ವಿಜಯೋತ್ಸವ

Vishwanath S
Updated On : 18 Nov 2013, 12:41 pm

ಚಿಂತಾಮಣಿ: ವಿಜ್ಞಾನಿ ಡಾ.ಸಿ.ಎನ್.ಆರ್.ರಾವ್ ಅವರಿಗೆ ಭಾರತರತ್ನ ಪ್ರಶಸ್ತಿ ಪುರಸ್ಕಾರ ಸಿಕ್ಕಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ವಿಜಯೋತ್ಸವ ಆಚರಿಸಿದವು.
ಪಟ್ಟಣದ ಗಜಾನನ ವೃತ್ತದಲ್ಲಿ ಭಾನುವಾರದಂದು ಮೂಲತಃ ಚಿಂತಾಮಣಿ ತಾಲೂಕಿನವರೇ ಆದ ಡಾ.ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ ಎಂಬುವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಭಾರತರತ್ನ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕನ್ನಡ ಪರ ಸಂಘಟನೆಗಳು ನಾಗರಿಕರಿಗೆ ಸಿಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಕೃಷ್ಣೋಜಿರಾವ್ ಮಾತನಾಡಿ, ಸಂಶೋಧನೆಯಲ್ಲಿ ಹಂತ ಹಂತವಾಗಿ ವಿಜ್ಞಾನದಲ್ಲಿ ಹೆಸರು ಗಳಿಸಿ ಕರ್ನಾಟಕದ ಪಾಲಿಗೆ ಮೂರನೇ ಬಾರಿಗೆ ಭಾರತರತ್ನ ಪ್ರಶಸ್ತಿ ಸಿಕ್ಕಿರುವ ಹಾಗೂ ವಿಜ್ಞಾನಿಯಾಗಿ ಬೆಳೆದ ಡಾ.ಸಿ.ಎನ್.ಆರ್.ರಾವ್ ಅವರ ಕೀರ್ತಿ ಇಡೀ ಜಗತ್ತಿಗೆ ಬೆಳಕಾಗಿದೆ ಎಂದರು.
ಕನ್ನಡ ಸೇನೆ ಕರ್ನಾಟಕದ ತಾಲೂಕು ಅಧ್ಯಕ್ಷ ಕುಂಟಗಡ್ಡ ಲಕ್ಷ್ಮಣ್, ಮುಖಂಡರಾದ ಟಿ.ವಿ ಪ್ರಕಾಶ್‌ಬಾಬು, ಏಜಾಜ್, ಕೇಬಲ್ ನಾರಾಯಣಸ್ವಾಮಿ ಸೇರಿದಂತೆ ಇನ್ನೂ ಹಲವು ಕನ್ನಡಪರ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವದಲ್ಲಿ ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement