ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಯುವತಿಯರನ್ನು ಪ್ರೀತಿಸಿ ಮೋಸ ಮಾಡುತ್ತಿದ್ದವನ ಬಂಧನ

Vishwanath S
Updated On : 18 Nov 2013, 12:40 pm

ಚಿಕ್ಕಬಳ್ಳಾಪುರ: ಅಮಾಯಕ ಯುವತಿಯರನ್ನು ಪ್ರೀತಿ ಬಲೆಯಲ್ಲಿ ಬೀಳಿಸಿ ಕೊನೆಗೆ ಅವರಿಗೆ ಮೋಸ ಮಾಡುತ್ತಿದ್ದವನೊಬ್ಬನನ್ನು ಇಲ್ಲಿನ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ತಾಲೂಕಿನ ಇಟಪನಹಳ್ಳಿಯ ಮಧು (31 ವರ್ಷ) ಆರೋಪಿ. ಕಂಡ ಕಂಡ ಹುಡುಗಿಯರ ಜತೆಗೆ ಸಲುಗೆ ಬೆಳೆಸಿಕೊಂಡು ಮದುವೆಯಾಗುವ ನಾಟಕವಾಡುತ್ತಿದ್ದ ಈತ ಕೊನೆಗೆ ಕೈ ಕೊಡುತ್ತಿದ್ದನು ಎನ್ನಲಾಗಿದೆ.
ನಗರದ ಇಂದಿರಾನಗರ ಕಾಲೋನಿಯಲ್ಲಿ ಕಳೆದ 10 ವರ್ಷಗಳ ಹಿಂದೆ ಬಾಡಿಗೆ ಮನೆಯನ್ನು ಪಡೆದುಕೊಂಡು ವಾಸವಾಗಿದ್ದ ಮಧು ಮನೆಯ ಮಾಲೀಕನ ಮಗಳೊಂದಿಗೆ ಪ್ರೀತಿಯ ನಾಟಕವಾಡಿದ್ದು ಆಕೆಯೊಂದಿಗೆ ಸಂಬಂಧ ಬೆಳೆಸಿ ಮೂರ್ನಾಲ್ಕು ಬಾರಿ ಗರ್ಭವತಿಯನ್ನಾಗಿಸಿದ್ದ. ಇದು ಬೆಳಕಿಗೆ ಬಾರದಿರಲು ಮದುವೆಯಾಗುವುದಾಗಿ ನಂಬಿಸಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತವನ್ನೂ ಮಾಡಿಸಿದ್ದನು ಎನ್ನಲಾಗಿದೆ.ಈ ನಡುವೆ ಮನೆಗೆ ಕೊಡಬೇಕಾದ ಬಾಡಿಗೆ ಹಣವೂ ಉಳಿಯುತ್ತದೆ. ಜತೆಗೆ ಹುಡುಗಿಯಿಂದ ಕೈಗೆ ಹಣವೂ ಸಿಗುತ್ತದೆ ಎಂಬ ದುರಾಲೋಚನೆಯಲ್ಲಿ ಪ್ರೀತಿಯ ಹೆಸರಿನಲ್ಲಿ ವಂಚನೆಯ ವ್ಯವಹಾರವನ್ನು ಮುಂದುವರೆಸಿದ್ದ.ಇತ್ತೀಚೆಗೆ ಅಂಗಡಿಯನ್ನು ತೆರೆಯಬೇಕೆಂದು ಹೇಳಿ 40 ಸಾವಿರ ರೂ ಜತೆಗೆ, ಹುಡುಗಿಯಿಂದ ಒಡವೆಗಳನ್ನು ಗಿಟ್ಟಿಸಿಕೊಂಡಿದ್ದು ಮತ್ತೊಂದು ಕಡೆ ದೊಡ್ಡಬಳ್ಳಾಪುರದ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದ. ಬರುತ್ತ ಬರುತ್ತ ಮಾಜಿ ಪ್ರೇಯಸಿಯನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದರಿಂದ ಆಕ್ರೋಶಗೊಂಡ ಚಿಕ್ಕಬಳ್ಳಾಪುರದ ಯುವತಿ ಮದುವೆಯಾಗುವಂತೆ ಒತ್ತಾಯಿಸಿದಾಗ ನಾಪತ್ತೆಯಾಗಿ ದೊಡ್ಡಬಳ್ಳಾಪುರದ ವಿದ್ಯಾರ್ಥಿನಿಯನ್ನು ದೂರ ಕರೆದುಕೊಂಡು ಹೋಗಿ ಮದುವೆಯಾಗಲು ಸಿದ್ಧತೆಗಳನ್ನು ಕೈಗೊಂಡಿದ್ದ.
 ಈ ವಿಷಯವನ್ನು ತಿಳಿದ ಯುವತಿಯರು ಮತ್ತು ಅವರ ಪೋಷಕರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಈತ ಅನೇಕ ಮಂದಿ ಯುವತಿಯರನ್ನು ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಿಂದೆ ಚಿಂತಾಮಣಿಯಲ್ಲಿ ನರ್ಸ್  ಒಬ್ಬರಿಗೆ ಕೈ ಕೊಟ್ಟಿದ್ದ...ತಮ್ಮ ಸ್ವಂತ ಊರು ಇಟಪನಹಳ್ಳಿಯಲ್ಲಿ,ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಸುಮಾರು 15 ಕ್ಕೂ ಹೆಚ್ಚು ಯುವತಿಯರನ್ನು ವಂಚಿಸಿದ್ದಾನೆ ಎನ್ನಲಾಗಿದೆ.
ಈ ನಡುವೆ ಮಧುವಿನ ಈ ವರ್ತನೆಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದ್ದು ಯುವತಿ ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಬಾಲಾಜಿ ಸಿಂಗ್, ನಗರ ಠಾಣೆಯ ಉಪ ನಿರೀಕ್ಷ ಸಿ.ಬಿ. ಶಿವಸ್ವಾಮಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಮಾಯಕ ಯುವತಿಯರ ಜೀವನನೊಂದಿಗೆ ಚೆಲ್ಲಾಟವಾಡಿದ ಮಧು ಮಾತ್ರ ಈಗ ಜೈಲಿನಲ್ಲಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement