ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾನೂನು ವಿದ್ಯಾರ್ಥಿಗಳು ಸಮಾಜಮುಖಿಗಳಾಗಿ

Rashmi Kasaragodu
Updated On : 27 Nov 2013, 2:16 am

ಕ.ಪ್ರ.ವಾರ್ತೆ   ಕೋಲಾರ   ನ. 26
ಕಾನೂನು ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಮುಗಿಸಿದ ಬಳಿಕ ಸಮಾಜಮುಖಿಗಳಾಗಿ ಕೆಲಸ ನಿರ್ವಹಿಸುವ ಮೂಲಕ ನ್ಯಾಯಾಂಗಕ್ಕೆ ಹೆಚ್ಚಿನ ಘನತೆ ಮತ್ತು ಗೌರವ ತಂದುಕೊಡಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್. ರೇಣುಕಾಪ್ರಸಾದ್ ಕರೆ ನೀಡಿದರು.
ಕೋಲಾರ ತಾಲೂಕಿನ ಅರಹಳ್ಳಿಯಲ್ಲಿ ಮಂಗಳವಾರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾನೂನು ದಿನಾಚರಣೆ ಕಾರ್ಯಕ್ರಮ ಹಾಗೂ ಕಾನೂನು ಸಲಹಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಅನ್ಯಾಯಕ್ಕೊಳಗಾದ ಜನತೆಗೆ ನ್ಯಾಯ ದೊರಕಿಸಲು ವಕೀಲರು ಟೊಂಕ ಕಟ್ಟಿ ನಿಂತು ರಾಷ್ಟ್ರದ ಬೆಳವಣಿಗೆಗೆ ವಿಶಿಷ್ಠವಾದ ಕೊಡುಗೆ ನೀಡುತ್ತಿದ್ದಾರೆ. ಅದೇ ರೀತಿ ತಾವು ವ್ಯಾಸಂಗ ಮುಗಿಸಿ ವಕೀಲಿ ವೃತ್ತಿಗೆ ಬಂದ ನಂತರ ಬಡವರ ಹಾಗೂ ಶೋಷಿತರ ಪರವಾಗಿ ಕಾಳಜಿ ವಹಿಸಬೇಕೆಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ವಿ. ರೇಣುಕಾ ಊರುಗಳಲ್ಲಿ ಜನರಿಗೆ ಸಂಬಂಧಿಸಿದ ಸಮಸ್ಯೆ ಬಂದಾಗ ಸೂಕ್ತ ಸಲಹೆ ನೀಡುವುದು ಕಾನೂನು ಸಲಹಾ ಕೇಂದ್ರದ ಉದ್ದೇಶವಾಗಿದೆ. ಸಮಿತಿಯು  ಸುತ್ತಮುತ್ತಲ ಊರುಗಳಿಗೆ ತೆರಳಿ ಸಮಸ್ಯೆಗಳ ಬಗ್ಗೆ  ಸಮೀಕ್ಷೆ ನಡೆಸಿ ಪರಿಹಾರ ಕಂಡುಕೊಳ್ಳುತ್ತಿದೆ ಎಂದರು.
ಕಾನೂನು ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನೂನು ಸಲಹಾ ಕೇಂದ್ರಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ಗ್ರೇಡ್ ನೀಡಿ ಪುರಸ್ಕರಿಸಲಾಗುವುದು ಎಂದು ತಿಳಿಸಿದರು. ಕಾನೂನು ದಿನಾಚರಣೆಯ ಪ್ರಾಮುಖ್ಯತೆ ಬಗ್ಗೆ ಹಿರಿಯ ವಕೀಲ ಸಾ.ನಾ. ಮೂರ್ತಿ, ವಕೀಲ ನರೇಂದ್ರಬಾಬು ಮಾತನಾಡಿದರು.
ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ  ಅನಿತಾ ಅಧ್ಯಕ್ಷತೆ ವಹಿಸಿದ್ದರು.  ನ್ಯಾಯಾಧೀಶರುಗಳಾದ ಮಲ್ಲಿಕಾರ್ಜುನ ಕಿಣಕೇರಿ,  ಮನಗೋಳಿ ಪ್ರೇಮಾವತಿ ಮಲ್ಲಿಕಾರ್ಜುನ್, ಕೆಂಗಬಾಲಯ್ಯ, ಜಿ. ಕುಮಾರ್, ಶಕುಂತಲಾ, ಆರ್. ನಟೇಶ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪಿ. ನಾರಾಯಣಸ್ವಾಮಿ ಇದ್ದರು.
ಸಹಾಯಕ ಪ್ರಾಧ್ಯಾಪಕ ಮಂಜುನಾಯಕ್ ಸ್ವಾಗತಿಸಿ, ಉಪನ್ಯಾಸಕ  ಸುಮಂತ್ ನಿರೂಪಿಸಿ, ಕಾನೂನು ಸಲಹಾ ಕೇಂದ್ರದ ಸದಸ್ಯ ಪಕೀರೇಶ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement