ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗಡಿಭಾಗದಲ್ಲಿ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ

Rashmi Kasaragodu
Updated On : 27 Nov 2013, 2:18 am

ಗೌರಿಬಿದನೂರು; ಗಡಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ನಡೆಯುತ್ತಿರುವುದು ಭಾಷೆ ಬೆಳವಣೆಗೆಗೆ ಸಹಕಾರಿ ಎಂದು ವಿಧಾಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು. ಪಟ್ಟಣದ ಆಚಾರ್ಯ ಕಾಲೇಜು ಮೈದಾನದಲ್ಲಿ ಕರುನಾಡುಕನ್ನಡಿಗರ ರಕ್ಷಣಾವೇದಿಕೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕನ್ನಡ ಭಾಷೆ ಉಳಿಸಿಬೆಳೆಸುವ ಮೂಲಕ ಎಲ್ಲವನ್ನೂ ಗಳಿಸಬಹುದು ಎಂದರು. ತಹಸೀಲ್ದಾರ್ ಡಾ. ಭಾಸ್ಕರ್ ಮಾತನಾಡಿ, ತೆಲುಗು ಭಾಷಿಗರು ಹೆಚ್ಚಿದ್ದರೂ ಗಡಿತಾಲೂಕಾದರೂ ಕನ್ನಡದ ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರುವ ಮೂಲಕ ಭಾಷಾ ಸಾಮರಸ್ಯ ಬೆಳೆಸಿಕೊಂಡಿರುವುದು ಶ್ಲಾಘನೀಯ ಎಂದರು. ಶಶಿಧರ ಭಟ್ ಮಾತನಾಡಿ, ವಿದುರಾಶ್ವತ್ಥ ಕ್ಷೇತ್ರ ಪೌರಾಣಿಕ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕರ್ನಾಟಕ ಜಲಿಯನ್ ವಾಲಾಭಾಗ್ ಎಂಬ ಕೀರ್ತಿ ಹೊಂದಿದೆ ಈ ನೆಲ ಕನ್ನಡಭಾಷೆ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದೆ ಎಂದರು. ವೇದಿಕೆ ಅಧ್ಯಕ್ಷ ಜಿ. ಬಾಲಾಜಿ, ನಾಡು ನುಡಿಗಾಗಿ ವೇದಿಕೆ ಬದ್ದವಾಗಿದೆ ಎಂದರು. ಎಚ್.ವಿ. ಮಂಜುನಾಥ್ ಮಾತನಾಡಿದರು. ನಟಿ ಪೂಜಾಗಾಂಧಿ, ನಟ ಕೋಮುಲ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ವೃತ್ತ ನಿರೀಕ್ಷಕ ಕೆ.ನಾಗರಾಜ್, ಬೈರಾ, ಯಶ್ವಂತ್, ಹನುಮಂತರೆಡ್ಡಿ, ಹನುಮಂತೇಗೌಡ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement