ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ
ಮುಳಬಾಗಲು; ಕಂದಾಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಕೋಲಾರ ಉಪ ವಿಭಾಗಾಧಿಕಾರಿ ಎಂ.ಎನ್. ಮಂಜುನಾಥ್ ಸೂಚಿಸಿದರು.
ಪಟ್ಟಣದಲ್ಲಿ ಮಂಗಳವಾರ ಜಮಾಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿ, ತಾಂತ್ರಿಕ ಯುಗದಲ್ಲಿ ಕಂದಾಯ ಇಲಾಖೆ ಹಲವಾರು ಬದಲಾವಣೆ ಕಂಡಿದೆ. ಅದಕ್ಕೆ ಪೂರಕವಾಗಿ ಜಮೀನು ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ವಿತರಿಸುವುದು ಒಂದಾಗಿದೆ, ಇದರಿಂದ ಭೂದಾಖಲೆ ಕೆಳಗಿನ ಹಂತದ ಅಧಿಕಾರಿಗಳು ತಿದ್ದುವುದು ಹಾಗೂ ದುರುಪಯೋಗ ಪಡಿಸಿಕೊಳ್ಳುವುದು ತಪ್ಪುತ್ತದೆ ಎಂದರು.
ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಮಾತನಾಡಿ, ಹಿಂದೆ ಜಮಾಬಂಧಿ ಗ್ರಾಮಗಳ ಮತ್ತು ಆಯಾ ಕಂದಾಯ ವೃತ್ತಗಳಲ್ಲಿ ಮಹತ್ತರವಾದ ಸಭೆಯಾಗಿತ್ತು ಎಂದರು. ಡೆಪ್ಯೂಟಿ ತಹಸೀಲ್ದಾರ್‌ಗಳಾದ ಆನಂದ್, ವೆಂಕಟೇಶ್, ಹನುಮೇಶ್, ಬಲರಾಮೇಗೌಡ, ಅಲಂಗೂರು ನಾಗರಾಜ್, ಹರಿನಾಥ್, ಸಿ. ಸುಬ್ರಮಣ್ಯಂ ಇದ್ದರು.