ದೇಗುಲದಲ್ಲಿ ಲಲಿತ ಶಾಸ್ತ್ರನಾಮ ಕಾರ್ಯಕ್ರಮ
ಕೆಜಿಎಫ್: ಕಾರ್ತಿಕ ಸೋಮವಾರ ಪ್ರಯುಕ್ತ ಕೆಜಿಎಫ್ ನಗರದ ಶ್ರೀ ಪಥಾಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಲಲಿತ ಶಾಸ್ತ್ರನಾಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸುಮಾರು 150 ಮಂದಿಗೆ ಭಕ್ತಾಧಿಗಲಿಗೆ ಯೋಗದ ಬಗ್ಗೆ ಮತ್ತು ಆರೋಗ್ಯದ ಬಗ್ಗೆ ಕಾಲಜಿ ವಹಿಸುವ ಕುರಿತು ಅರಿವು ಮೂಡಿಸಲಾಯಿತು.
ನಂತರ ದೇವಸ್ಥಾನದ ಸೂತ್ತಲೂ ಕಾರ್ತಿಕ ದೀಪಗಳನ್ನು ಹಚ್ಚಿ ದೇವರಿಗೆ ವಿಶೇಷ ಪ್ರಾರ್ಥನೆ, ಪೂಜೆ, ಅರ್ಚನೆ ಮಾಡಿ ದೇವರ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಶ್ರೀ ಪಥಾಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಕರುಣಾಕರಣ್, ಯೋಗ ಗುರು ಶ್ರೀನಿವಾಸ್, ಶಿಕ್ಷಕರಾದ ಪರಮೇಶ್, ಆನಂದರೆಡ್ಡಿ, ವಿಜಯಲಕ್ಷ್ಮೀ ಮತ್ತಿತರರು ಹಾಜರಿದ್ದರು.