ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮತದಾರ ಪಟ್ಟಿಗೆ ಹೆಸರು ಸೇರಿಸಲು, ತಿದ್ದುಪಡಿ ಮಾಡಿಸಿಕೊಳ್ಳಲು 30 ರವರೆಗೆ ಗಡುವು

Rashmi Kasaragodu
Updated On : 27 Nov 2013, 2:17 am

ಚಿಕ್ಕಬಳ್ಳಾಪುರ: ಮತದಾರ ಪಟ್ಟಿಯಲ್ಲಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು, ಹೊಸದಾಗಿ ಹೆಸರನ್ನು ಸೇರ್ಪಡೆ ಮಾಡಿಸಿಕೊಳ್ಳಲು ನ.30 ರವರೆಗೆ ಅವಕಾಶ ನೀಡಲಾಗಿದ್ದು ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ತಹಶೀಲ್ದಾರ್ ನಟೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 1,76,246 ಮತದಾರರಿದ್ದು ಇದರಲ್ಲಿ ಪುರುಷ ಮತದಾರರು 89663, ಮಹಿಳೆಯರು 86566, ಇತರರು 17 ಮತದಾರರಿದ್ದಾರೆ. ಈ ನಡುವೆ ಹೊಸದಾಗಿ ಮತದಾರ ಪಟ್ಟಿಯಲ್ಲಿ ಮತದಾರರನ್ನು ಸೇರ್ಪಡೆ ಮಾಡಿಸಿಕೊಳ್ಳುವ ಕಾರ್ಯ ಚುರುಕಾಗಿ ನಡೆಯುತ್ತಿದೆ ಎಂದರು.
ಪ್ರಸ್ತುತ ನೋಂದಣಿ ಮಾಡಿಕೊಂಡಿರುವುದರಲ್ಲಿ ಹೆಸರಲ್ಲಿ ದೋಷವಿದ್ದರೆ,ವಿಳಾಸ ಬದಲಾವಣೆಯಾಗಿದ್ದರೆ, ಬೇರೆ ಕಡೆ ವರ್ಗಾವಣೆಯಾಗಿದ್ದರೆ ಅಥವಾ ಕುಟುಂಬದಲ್ಲಿ ಯಾರಾದರೂ ಮೃತಪಟ್ಟು ಅವರ ಹೆಸರನ್ನು ತೆಗೆಸಲು ಅವಕಾಶವಿದೆ.ಅಲ್ಲದೇ ಅರ್ಹ ದಾಖಲೆಗಳನ್ನು ಕೊಟ್ಟು 18 ವರ್ಷ ಮೇಲ್ಪಟ್ಟವರು ಹೊಸದಾಗಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು.
ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಬೇಕಾದರೆ ಈ ತಿಂಗಳ 30 ರವರೆಗೆ ಅವಕಾಶವಿದ್ದು ಪೂರ್ಣ ಮತದಾರರ ಪಟ್ಟಿಯನ್ನು 2014 ಜ.1 ರಂದು ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ 08156270431 ಅಥವಾ ಮೊ.ಸಂ.9538379166  ಅನ್ನು ಸಂಪರ್ಕಿಸಬಹುದು. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿ ಆಗಿದೆಯೋ,ಇಲ್ಲವೋ ತಿಳಿಯಲು ಖಂಖ ಮೂಲಕ ಕೂಡ ತಿಳಿಯಬಹುದಾಗಿದ್ದು, ಇದಕ್ಕಾಗಿ ್ಞಛಜಠ್ಝ್ಛ ಜೊತೆ ಘ್ಟ್ಡ್ಠ ಊಠ್ಝ್ಛ ಃ್ಡಟಛಿಜ್ಠ ಅನ್ನು ಟೈಪ್ ಮಾಡಿ ಮೊಬೈಲ್ ಸಂಖ್ಯೆ 9243355223 ಸಂಖ್ಯೆಗೆ ಎಸ್.ಎಂ.ಎಸ್ ಮಾಡಿದರೆ ಮತಗಟ್ಟೆ ವಿವರ, ಮತ ಸಂಖ್ಯೆ ಹಾಗೂ ಇನ್ನಿತರ ಮಾಹಿತಿ ಬರುತ್ತದೆ. ಇದಲ್ಲದೇ ಆನ್‌ಲೈನ್ ಮೂಲಕ ಸಹ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು, ಇದಕ್ಕಾಗಿ ್ಛಜ್ಟ.ಟ್ಝ್ಛಿ.್ಞಛ್ಠ.್ಝಟಿ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement