ಆದಿಶ್ರೀ ಗುರು ಸ್ಮರಣೆ
ಚಿಂತಾಮಣಿ: ಬಾಲಗಂಗಾಧರನಾಥ ಸ್ವಾಮೀಜಿ ಗುರು ಸ್ಮರಣೆ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಲು ಸಹಕರಿಸಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದ ಸ್ವಾಮೀಜಿ ಕರೆ ನೀಡಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬಾಲಗಂಗಾಧರನಾಥ ಸ್ವಾಮೀಜಿ ಗುರು ಸ್ಮರಣೆ ಕಾರ್ಯಕ್ರಮ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ, ಎಲ್ಲಾ ವರ್ಗಗಳ ಹಿತ ಬಯಸಿದ ಶ್ರೀಗಳ ಗುರು ಸ್ಮರಣೆ ಕಾರ್ಯಕ್ರಮ ಡಿ.15 ರಂದು ಚಿಕ್ಕಬಳ್ಳಾಪುರದಲ್ಲಿ ನಡೆಸಲು ತೀರ್ಮಾನಿಸಿರುವುದರಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.
ಪುತಳಿ ನಿರ್ಮಾಣಕ್ಕೆ ನೆರವಿಗೆ ಮನವಿ: ಬಾಲಗಂಗಾಧರನಾಥ ಸ್ವಾಮೀಜಿ ಗುರು ಸ್ಮರಣೆ ಅಂಗವಾಗಿ ಬೆಳ್ಳಿಯಲ್ಲಿ ಸ್ವಾಮೀಜಿಗಳ ಪುತ್ಥಳಿ ನಿರ್ಮಿಸಲು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದದೊಂದಿಗೆ ಉದ್ದೇಶಿಸಲಾಗಿದ್ದು, ಭಕ್ತಾಧಿಗಳು ಬೆಳ್ಳಿಯನ್ನು ದಾನವಾಗಿ ನೀಡಬಹುದೆಂದು ಕರೆ ನೀಡಿದರು.
ವಿಪ ಸದಸ್ಯ ಕೆ.ವಿ. ಸುಬ್ಬಾರೆಡ್ಡಿ, ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ತಾಪಂ ಅಧ್ಯಕ್ಷ ಗೌರಮ್ಮನಾಗೇಶ್, ಯಳವಲ್ಲಿ ರಮೇಶ್, ಆಂಜನೇಯರೆಡ್ಡಿ, ತಳಗವಾರ ಪ್ರತಾಪ್, ಲಕ್ಷ್ಮಿದೇವಕೋಟೆ ನಾರಾಯಣರೆಡ್ಡಿ,ತಿಮ್ಮಸಂದ್ರ ಚೌಡರೆಡ್ಡಿ, ಮಾಳಪ್ಪಲ್ಲಿ ಮುನಿಸ್ವಾಮಿರೆಡ್ಡಿ ಇದ್ದರು.