ಚಿಕ್ಕ ಕುಂತೂರಿನಲ್ಲಿ ಮಕ್ಕಳ ಗ್ರಾಮ ಪಂಚಾಯ್ತಿ ಸಭೆ ಪ್ರದರ್ಶನ
ಮಾಲೂರು: ತಾಲೂಕಿನ ಚಿಕ್ಕ ಕುಂತೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಪಂಚಾಯ್ತಿ ವತಿಯಿಂದ ಮಕ್ಕಳ ಗ್ರಾಮಪಂಚಾಯ್ತಿ ಸಭೆ ಪ್ರದರ್ಶನವನ್ನು ಬುಧವಾರ ಏರ್ಪಡಿಸಲಾಗಿತ್ತು.
ಶಾಲಾ ಮಕ್ಕಳಲ್ಲೇ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಹಾಗೂ ಪಂಚಾಯ್ತಿ ಅಧಿಕಾರಿಗಳನ್ನು ಆರಿಸ ಪಂಚಾಯ್ತಿ ನಡೆಸಲಾಯಿತು. ಗ್ರಾಮದ ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸಿದ ಮಕ್ಕಳ ಗ್ರಾಮ ಸಭೆಯು ಸರ್ಕಾರದಿಂದ ಗ್ರಾಮ ಅಭಿವೃದ್ಧಿಗೆ ಬರುತ್ತಿರುವ ಯೋಜನೆಗಳನ್ನು ತಿಳಿಸಲಾಯಿತು. ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಪಂಚಾಯ್ತಿ ಅಧ್ಯಕ್ಷರ ವೇಷಧಾರಿ ವಿದ್ಯಾರ್ಥಿ ಉತ್ತರಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಪಿಡಿಒ ಸಂದೀಪ್, ರಾಮೇಗೌಡ, ಲಕ್ಷಣ್ ರೆಡ್ಡಿ ಹಾಗೂ ಶಾಲಾ ಶಿಕ್ಷಕರು ಪ್ರಶ್ನೆಗಳನ್ನು ಕೇಳಿ ಪಂಚಾಯ್ತಿಯ ಕಾರ್ಯವಿಧಾನವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.