ನೂತನ ಕಲ್ಯಾಣ ಮಂಟಪಕ್ಕೆ ಚಾಲನೆ
ಚಿಂತಾಮಣಿ: ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿರುವ ನರೇಶ್ ಇನ್ನೂ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಲಿ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ತಾಲೂಕಿನ ಮುರುಗಮಲೆ ಗ್ರಾಮದ ಶ್ರೀ ಮುಕ್ತೀಶ್ವರಸ್ವಾಮಿ ದೇವಾಲಯದಲ್ಲಿ ನೂತನ ಕಲ್ಯಾಣ ಮಂಟಪಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಿಸಿ ಕೊಟ್ಟ ಬೆಂಗಳೂರಿನ ಫಾರ್ಚುನ ಪ್ರಾಜೆಕ್ಟ್ ಉದ್ಯಮಿ ಎಸ್.ವಿ. ನರೇಶ್ ಮುಂದಿನ ದಿನಗಳಲ್ಲಿ ಹೆಚ್ಚು ಜನ ಸೇವೆ ಮಾಡಲಿ ಎಂದು ಹಾರೈಸಿದರು.
ನಂತರ ಕೈವಾರ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಎಂ.ಆರ್. ಜಯರಾಮ್ ಮಾತನಾಡಿದರು. ರೇಷ್ಮೆ ಮಂಡಳಿಯ ಅಧ್ಯಕ್ಷ ಬಿಸ್ಸೇಗೌಡ, ಜಿಪಂ ಸದಸ್ಯ ಶೇಕ್ ಮೌಲಾ, ಎಲ್.ನರಸಿಂಹರೆಡ್ಡಿ, ವಾಣಿಕೃಷ್ಣಾರೆಡ್ಡಿ, ಗುಡಿಯಪ್ಪ, ಕಮಲಮ್ಮ ಇದ್ದರು.