ಮಾದರಿ ಗ್ರಾಪಂ; ಅಭಿನಂದನೆ
ಟೇಕಲ್: ನೂಟವೆ ಗ್ರಾಪಂನ್ನು ಮಾಲೂರು ತಾಲೂಕಿನಲ್ಲಿಯೆ ಮಾದರಿಯಾಗಿದ್ದು ಇದಕ್ಕೆ ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡರ ಸಾಧನೆ ಅಮೋಘವೆಂದು ಶಾಸಕ ಮಂಜುನಾಥಗೌಡ ತಿಳಿಸಿದರು.
ತೊರಲಕ್ಕಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ತಾನು ಶಾಸಕನಾದ ಮೇಲೆ ಪ್ರತಿ ಹಳ್ಳಿಗೂ ಭೇಟಿ ನೀಡುತ್ತಿದ್ದು, ಜನರ ಸಮಸ್ಯೆಗಳ ಮಾಹಿತಿ ಸಂಗ್ರಹಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವುದಾಗಿ ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ವೈ. ನಂಜೇಗೌಡ, ಕ್ಷೇತ್ರದಲ್ಲಿ ನರೇಗಾ ಕಾರ್ಯಕ್ರಮ ಯಶಸ್ವಿಗೊಳಿಸಲು ನೂಟವೆ ಗ್ರಾಪಂ ವ್ಯಾಪ್ತಿಯ ಎಲ್ಲಾ 16 ಸದಸ್ಯರ ಒಗ್ಗಟ್ಟಿನ ಫಲ ಹಾಗೂ ಅಧಿಕಾರಿಗಳ ಬೆಂಬಲದಿಂದ ಸಾಧ್ಯವಾಯಿತು ಎದರು.
ಗುರುವಗೊಲ್ಲಹಳ್ಳಿಯ ಸಂಪತ್, ಅಣ್ಣಯ್ಯ, ಪಾರ್ಥ, ಶ್ರೀನಿವಾಸ್ ಕಿರಣ್, ಪ್ರಯೋಗ್ನ ರಾಜಣ್ಣ ಇದ್ದರು.