ಸುದ್ದಿ ಸಂಕ್ಷೇಪ
ಎಪಿಎಂಸಿ ಮಾರುಕಟ್ಟೆ ಸಪ್ತಾಹ
ಮುಳಬಾಗಲು; ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಾಗ ಎಲೆಕ್ಟ್ರಾನಿಕ್ ಯಂತ್ರಗಳ ಮೂಲಕವೇ ತೂಕ ಮಾಡಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಕುರುಡುಮಲೆ ಮಂಜುನಾಥ್ ಹೇಳಿದರು.ಪಟ್ಟಣದ ಎಪಿಎಂಸಿ ಮಾರುಕಟ್ಟಿ ಆವರಣದಲ್ಲಿ ಏರ್ಪಡಿಸಿದ್ದ ಮಾರುಕಟ್ಟೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಬಿಳಿ ಚೀಟೆ ತಿರಸ್ಕರಿಸಿ ಅಧಿಕೃತ ಲೆಕ್ಕತಿರುವಳೆ ಪಟ್ಟಿ ಪಡೆಯಲು ಸೂಚಿಸಿದರು. ಸಮಿತಿ ಕಾರ್ಯದರ್ಶಿ ಎಂ. ಕೃಷ್ಣನ್ ಮಾತನಾಡಿ, ಮಾರುಕಟ್ಟೆಯಲ್ಲಿ ರೈತರಿಗೆ ಕಮೀಷನ್ಗಾಗಿ ಪೀಡಿಸಿಸಿದರೇ ತಮ್ಮ ಗಮನಕ್ಕೆ ತಂದರೆ ಕಾನೂನಿನಂತೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಆರ್. ಕೃಷ್ಣಪ್ಪ, ಕುಮಾರಿಚಾರಿ, ಕೆ. ಸತೀಶ್, ಕೆ.ಎಂ. ಸತೀಶ್, ಕೆ. ಸೊಣ್ಣಿಗೌಡ, ಗೋವಿಂದಪ್ಪ, ಶ್ರೀರಾಮಪ್ಪ ಇದ್ದರು.
ಡಾಕ್ಟರೇಟ್
ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಎಸ್. ಫೈರೋಜ್ ಅವರಿಗೆ ಬೆಂಗಳೂರು ವಿಶ್ವ ವಿದ್ಯಾನಿಲಯ ಡಾಕ್ಟರೇಟ್ (ಪಿ.ಎಚ್.ಡಿ) ನೀಡಿ ಗೌರವಿಸಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಶೇಖ್ ಮಸ್ತನ್ ಮಾರ್ಗದರ್ಶನದಲ್ಲಿ ಶಿಕ್ಷಣ ತಜ್ಞ ಡಾ.ಎಚ್. ನರಸಿಂಹಯ್ಯರವರ ಕುರಿತ ವಿಮರ್ಶಾತ್ಮಕ ಅಧ್ಯಯನ ಎಂಬ ವಿಷಯದ ಬಗ್ಗೆ ಮಂಡಿಸಿದ ಪ್ರಬಂಧಕ್ಕಾಗಿ ಫೈರೋಜ್ ಅವರಿಗೆ ಡಾಕ್ಟರೇಟ್ (ಪಿಎಚ್ಡಿ)ಸಿಕ್ಕಿದೆ.