ಅಕ್ರಮ ಮದ್ಯ ಮಾರಾಟ; ಧರಣಿ
ಶ್ರೀನಿವಾಸಪುರ; ತಾಲೂಕಿನ ವಿವಿಧ ಹಳ್ಳಿಗಳಲ್ಲಿ ನಡೆಯುತ್ತಿರುವ ಆಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಗಳಿಂದ ಧರಣಿ ಹಮ್ಮಿಕೊಳ್ಳಲಾಗಿತ್ತು. ಅಕ್ರಮ ಮದ್ಯ ನಿಗ್ರಹಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕುವುದನ್ನು ಬಿಟ್ಟು ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಪಿ. ನಾರಾಯಣಸ್ವಾಮಿ, ಕೆ.ಎಂ. ರೆಡ್ಡೆಪ್ಪ, ಗಂಗಾಧರ್, ಕೃಷ್ಣಾ ಹಾಗೂ ಪೆದ್ದಪಲ್ಲಿ ನಾರಾಯಣಸ್ವಾಮಿ ಇದ್ದರು.