ಆಟೋ ಚಾಲಕರ ಕನ್ನಡ ಸೇವೆ ಪ್ರಶಂಸನೀಯ
ಗೌರಿಬಿದನೂರು: ಆಟೋ ಚಾಲಕರು ಕನ್ನಡ ಉಳಿಸಿ ಬೆಳೆಸಲು ತಮ್ಮದೇ ಆದ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಪುರ ವೃತ್ತ ನಿರೀಕ್ಷಕ ಎಸ್. ಮಹೇಶ್ ಕುಮಾರ್ ತಿಳಿಸಿದರು.
ಪಟ್ಟಣದ ಕೆಎಸ್ಆರ್ಟಿಸಿ ಮುಂಬಾಗದ ಗಂಗಾಭಾಗೀರಥಿ ಆಟೋ ಚಾಲಕರ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಆಟೋ ಚಾಲಕರು ತಾಲೂಕಿನ ನಿಜವಾದ ರಾಯಬಾರಿಗಳು ಎಂದರು.
ಡಾ. ಶಶಿಧರ್ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರದ ವರ್ಷಗಳ ಇತಿಹಾಸ ವಿದ್ದು, ಇತ್ತೀಚಿನ ದಿನಗಳಲ್ಲಿ ಕನ್ನಡ ಪರ ಸಂಘಟಣೆಗಳು ಹಾಗೂ ಆಟೋ ಚಾಲಕರ ಸಂಘಗಳು ಕನ್ನಡಕ್ಕಾಗಿ ತಮ್ಮದೆ ಆದ ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯ ಎಂದರು. ಇದೇ ಸಂದರ್ಭದಲ್ಲಿ ಆಟೋ ಚಾಲಕರ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದರು. ದೇವಿ ಮಂಜುನಾಥ್, ಅಮಾನುಲ್ಲಾ, ಸಣ್ಣಕ್ಕಿ ವೆಂಕಟರವಣಪ್ಪ, ವೆಂಕಟಾಚಲ, ವಿಶ್ವನಾಥ ಗುಪ್ತ, ಅಮ್ಜತ್ ಖಾನ್ , ಚಂದ್ರ ಇದ್ದರು.