ಎಂಇಎಸ್ ಶಾಸಕರ ಪ್ರತಿಕೃತಿ ದಹನ
ಚಿಂತಾಮಣಿ: ಎಂಇಎಸ್ ಶಾಸಕರಾದ ಸಂಭಾಜಿ ಪಾಟೀಲ್ ಮತ್ತು ಅರವಿಂದ್ ಪಾಟೀಲ್ರನ್ನು ಶಾಸಕ ಸ್ಥಾನದಿಂದ ವಜಾ ಮಾಡಿ, ರಾಜ್ಯದಿಂದ ಗಡಿಪಾರು ಮಾಡಲು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿ ಎಂಇಎಸ್ ಶಾಸಕರ ವಿರುದ್ಧ ದಿಕ್ಕಾರ ಕೂಗಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಎಂ.ವಿ. ನಾಗರಾಜ್ ಮಾತನಾಡಿದರು. ತಾಲೂಕು ಅಧ್ಯಕ್ಷ ನಾಗರಾಜ್, ಮಂಜುಭಾರ್ಗವಿ, ತಿನಕಲ್ ವೆಂಕಟೇಶ್, ಮುರುಗಮಲ್ಲ ಶ್ರೀನಿವಾಸ್, ಶ್ರೀರಾಮನಗರ ಶಂಕರ್, ತಿಮ್ಮಸಂದ್ರ ದೇವರಾಜು ಇದ್ದರು.