ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಪ್ಪು ಮಾಡಿದ್ರೆ ಬಡ್ತಿ ಕಟ್

Mainashree
Updated On : 28 Nov 2013, 10:54 am

ಒಂದು ವೇಳೆ ಹಿಂದೆ ಯಾವುದಾದರೂ ತಾಲೂಕು ಮಟ್ಟದ ಅಧಿಕಾರಿಗಳು ತಪ್ಪಾಗಿ ಜಾತಿ ಪ್ರಮಾಣ ಪತ್ರ ನೀಡಿದಲ್ಲಿ ಅಂತಹ ದಾಖಲೆಯನ್ನು ರದ್ದುಪಡಿಸುವ ಅಧಿಕಾರ ನಿಮಗೆ ನೀಡಲಾಗಿದೆ. ಅರ್ಜಿದಾರ ನೀಡುವ ದಾಖಲೆಗಳೊಂದಿಗೆ ಊರುಗಳಿಗೆ ಹೋಗಿ ಅಧ್ಯಯನ ಮಾಡಿದಲ್ಲಿ ಯಾವುದೇ ಗೊಂದಲವಿಲ್ಲದೆ ಜಾತಿ ಪ್ರಮಾಣ ಪತ್ರ ನೀಡಬಹುದಾಗಿದ್ದು, ತಹಸೀಲ್ದಾರ್‌ಗಳು ಕ್ಷುಲ್ಲಕ ಕಾರಣಕ್ಕೆ ಅರ್ಜಿಗಳನ್ನು ರದ್ದು ಮಾಡಿ ಕಾನೂನಿನ ಕಣ್ಣಿಗೆ ಬೀಳಬೇಡಿ ಎಂದು ಕಿವಿಮಾತು ಹೇಳಿದರು. ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು ಸರಿಯಾಗಿ ಕೆಲಸ ಮಾಡಿದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ತಹಸೀಲ್ದಾರ್‌ಗಳು ಉತ್ತಮವಾಗಿ ಕೆಲಸ ಮಾಡಲು ಸಾಧ್ಯ. ಆದರೆ, ಅನೇಕ ಕಡೆ ಇವರು ಸರಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ, ಗ್ರಾಮ ಸಹಾಯಕರ ಮೇಲೆ ನಿಗಾವಹಿಸಿ ಕೆಲಸ ಮಾಡಿಸುವ ಹೊಣೆ ತಹಸೀಲ್ದಾರ್‌ಗಳ ಮೇಲೂ ಇದೆ ಎಂದ ಜಿಲ್ಲಾಧಿಕಾರಿಗಳು, ಒಂದು ವೇಳೆ ಗ್ರಾಮ ಲೆಕ್ಕಿಗರು ಮತ್ತು ಗ್ರಾಮ ಸಹಾಯಕರು ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಅವರಿಗೆ ಸಲ್ಲಬೇಕಾದ ಬಡ್ತಿಯನ್ನು ತಡೆ ಹಿಡಿಯಲು ಕಾನೂನಿನಲ್ಲಿ ಅವಕಾಶ ಉಂಟು ಎಂದು ಸೂಚ್ಯವಾಗಿ ನುಡಿದರು. ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಆಗಿರುವ ಲೋಪಗಳಂತೆ ಖಾತೆ ಬದಲಾವಣೆಯಲ್ಲೂ ಲೋಪಗಳು ಆಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಕಂದಾಯ ನಿರೀಕ್ಷಕರು ಮನಸ್ಸಿಗೆ ಬಂದ ರೀತಿಯಲ್ಲಿ ಕೆಲಸ ಮಾಡುವುದರಿಂದ ಸಮಸ್ಯೆ ಎದುರಾಗಲು ಕಾರಣವಾಗಿದೆ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಂದಾಯ ನಿರೀಕ್ಷಕರು ನಿಯಮಗಳನ್ನು ಮೀರಿ ಕೆಲಸ ಮಾಡಿದಲ್ಲಿ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement