ನಕಲಿ ಟಿಕೆಟ್ ಚೆಕಿಂಗ್ ಅಧಿಕಾರಿ ಬಂಧನ
ಶ್ರೀನಿವಾಸಪುರ: ಇತ್ತೀಚಿಗೆ ಪ್ರಾರಂಭಗೊಂಡಿರುವ ಬೆಂಗಳೂರು- ಕೋಲಾರ ಪ್ಯಾಸೆಂಜರ್ ರೈಲಿನಲ್ಲಿ ನಕಲಿ ಟಿಕೆಟ್ ಚೆಕಿಂಗ್ ಒಬ್ಬ ರೈಲ್ವೆ ಪೊಲೀಸರಿಗೆ ಸಿಕ್ಕಿ ಪೊಲೀಸರಿಂದ ಧರ್ಮದೇಟು ತಿಂದಿದ್ದಾನೆ. ಪಟ್ಟಣದ ಮುಷೀರ್ ಎಂಬಾತ ಬೆಂಗಳೂರು, ಚಿಕ್ಕಬಳ್ಳಾಪುರ, ಚಿಂತಾಮಣಿ, ಶ್ರೀನಿವಾಸಪುರ ಮಾರ್ಗದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಳಿ ತಾನು ಚೆಕಿಂಗ್ ಆಫೀಸರ್ ಎಂದು ಟಿಕೆಟ್ ಇಲ್ಲದ ಪ್ರಯಾಣಿಕರ ಮೇಲೆ ದಬ್ಬಾಳಿಕೆ ಮಾಡಿ ಹಣ ಕಸಿದುಕೊಳ್ಳುತ್ತಿದ್ದ ಆಸಾಮಿ ರೈಲ್ವೆ ಪೊಲೀಸರ ಅತಿಥಿಯಾಗಿದ್ದಾನೆ.