ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರು. 5 ಲಕ್ಷ ಬೆಲೆ ಬಾಳುವ ಗುಟ್ಕಾ ವಶ

Rashmi Kasaragodu
Updated On : 30 Nov 2013, 12:35 pm

ಗೌರಿಬಿದನೂರು: ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 5ಲಕ್ಷ ರು. ಮೌಲ್ಯದ ಸುಮಾರು 65 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟಿದ್ದ ಗುಟ್ಕಾ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಪಿಐ ಕೆ. ನಾಗರಾಜ್, ಪಿಎಸ್ಐ ಬೈರ ಮತ್ತು ತಂಡ ಪಟ್ಟಣದ ನೆಹರೂಜಿ ಕಾಲೊನಿಯ ವ್ಯಾಪಾರಿ ಅಸ್ಲಾಂಪಾಷಾ ಮತ್ತು ನ್ಯೂಪೇಟೆ ಮೇದರಬೀದಿಯ ವಾಸಿ ರಾಮು ದಾಸ್ತಾನು ಮಾಡಿದ್ದ ಗುಟ್ಕಾಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ
ಗುಡಿಬಂಡೆ: ಅಪ್ರಾಪ್ತ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ತಾಲೂಕಿನ ಸೋಮೇಶ್ವರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸೋಮೇಶ್ವರ ಗ್ರಾಮದ ಐದು ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾದವಳು. ಆರೋಪಿ ಹರೀಶ್(22) ಅದೇ ಗ್ರಾಮದವನಾಗಿದ್ದು ಬಾಲಕಿಯನ್ನು ಸರ್ಕಸ್ಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಈ ಕೃತ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ. ಬಾಲಕಿಯನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿದಾಗ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.
ಆರೋಪಿ ಬಂಧನ: ಅತ್ಯಾಚಾರ ವೆಸಗಿ ಪರಾರಿಯಾಗಿದ್ದ ಸೋಮೇಶ್ವರ ಗ್ರಾಮದ ಹರೀಶ್ (20)ನನ್ನು ಗುಡಿಬಂಡೆ ಪೊಲೀಸರು ಬಂಧಿಸುವಲ್ಲಿ ಯಶ್ವಿಸಿಯಾಗಿದ್ದಾರೆ. ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ಐಪಿಸಿ ಸೆಕ್ಷನ್ 376, ಅಟ್ರಾಸಿಟಿ, ಮಕ್ಕಳ ಲೈಗಿಂಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಐ ಶಿವಕುಮಾರ್, ಎಸ್ಸೈ ನರಸಿಂಹಮೂರ್ತಿ, ಪೇದೆಗಳಾದ ಮುರಳಿ, ಶ್ರೀನಾಥ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement