ಲಾರಿ ಹರಿದು ಕುರುಡ ವೃದ್ಧ ಸಾವು
ಟೇಕಲ್: ಲಾರಿಯೊಂದು ಹರಿದು 70 ವರ್ಷದ ವೃದ್ಧರೊಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ಕೆ.ಜಿ.ಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಜರುಗಿದೆ.
ಸುಮಾರು 4 ದಿನಗಳಿಂದ ಈತ ಟೇಕಲ್ನ ಆಸುಪಾಸಿನಲ್ಲಿ ಓಡಾಡುತ್ತಿದ್ದು ಈತನಿಗೆ ಎರಡೂ ಕಣ್ಣು ಕಾಣಿಸುತ್ತಿರಲಿಲ್ಲ, ಈತನ ಜೊತೆ ಸಾಕು ನಾಯಿಯೊಂದನ್ನು ಸರಪಳಿ ಕಟ್ಟಿ ಜೊತೆಯಲ್ಲೆ ಕರೆದೊಯ್ಯುತ್ತಿದ್ದನು. ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು ಮಾತನಾಡುವ ವೃದ್ಧನು ನಾನು ಮಾಸ್ತಿಯವನೆಂದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಕುಟುಂಬದವನೆಂದು ನಾನು ಈ ಹಿಂದೆ ಉಪನ್ಯಾಸಕನಾಗಿದ್ದೆನೆಂದು ನನಗೆ ಶ್ರೀನಿವಾಸಪುರಕ್ಕೆ ಹೋಗಲು ದಾರಿ ತೋರಿಸಿ ಎಂದು ಜನರನ್ನು ಕೇಳಿಕೊಳ್ಳುತ್ತಿದ್ದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹಿಂದಿನ ಕಥೆ: ಈ ಹಿಂದೆ ಈತ ಮಾಲೂರಿನಿಂದ ಕೋಲಾರಕ್ಕೆ ಬಂದಾಗ ಇದೇ ವೇಷದಲ್ಲಿ ನಾಯಿ ಜೊತೆ ಕಾಣಿಸಿಕೊಂಡಾಗ ಅಲ್ಲಿನ ಜನತೆ ರಾಜ್ಯ ಸರ್ಕಾರಕ್ಕೆ ತಿಳಿಸಿ ನಂತರ ಅಂದಿನ ಸಚಿವೆ ಶೋಭಾ ಕರೆಂದ್ಲಾಜೆ ಈತನಿಗೆ ಮಾಸ್ತಿ ಕುಟುಂಬದವರೆಂದು ತಿಳಿದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆಗ ಆತನ ಹೆಸರು ಚಕ್ರಪಾಣಿ ಎಂದು ತಿಳಿಸಲಾಗಿತ್ತು. ತದನಂತರ ಮಾಸ್ತಿ ಕುಟುಂಬದವರು ಈತನು ನಮ್ಮ ಕುಟುಂಬದವನಲ್ಲವೆಂದು ಸುಮ್ಮನೆ ನಮ್ಮ ಹೆಸರನ್ನು ಬಳಸಲಾಗುತ್ತಿದೆ ಎಂದು ಸುದ್ದಿಗೆ ಕಅಂತ್ಯ ಹಾಡಿದ್ದರು. ಆದರೆ ಆತ ಯಾರೆಂಬುದು ಮಾಹಿತಿ ಇಲ್ಲ. ಮಾಸ್ತಿ ಪಿಎಸ್ಐ ಸಿದ್ದಪ್ಪ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ನಂತರ ವಿದಿವಿಧಾನವನ್ನು ಮುಗಿಸಿದರು.