ಟೇಕಲ್ನಿಲ್ಲಿ ಹಾಡಹಗಲೇ ಒಡವೆ ಅಪಹರಣ
ಟೇಕಲ್: ಹಾಡಹಗಲೇ ಬೀಗ ಹಾಕಿದ ಮನೆಗೆ ಬೀಗ ಮುರಿದು ಒಳನುಗ್ಗಿದ ಕಳ್ಳರು ನಾಲ್ಕುವರೆ ಲಕ್ಷ ರು. ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ಹಣವನ್ನು ಮಾಸ್ತಿ ಗ್ರಾಮದ ದೊಡ್ಡ ಮಸೀದಿ ಬಳಿ ಶುಕ್ರವಾರ ದೋಚಿ ಪರಾರಿಯಾಗಿದ್ದಾರೆ. ಮಾಸ್ತಿ ಗ್ರಾಮದ ದೊಡ್ಡ ಮಸೀದಿ ಬಳಿ ಇರುವ ಜಾವಿದ್ ಬಿನ್ ದಸ್ತಗೀರ್ಸಾಬ್ ಎಂಬುವವರು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ತಮ್ಮ ಪತ್ನಿಯೊಂದಿಗೆ ಬೆಂಗಳೂರಿಗೆ ಹೋಗಿ ಸಂಜೆ 6-15ಕ್ಕೆ ಬರುವಷ್ಟರಲ್ಲಿ ಕಳ್ಳರು ಮನೆ ಬೀಗ ಮುರಿದು ಬೀರುವಿನಲ್ಲಿದ್ದ 150 ಗ್ರಾಂ ಚಿನ್ನ, 13 ಸಾವಿರ ನಗದು ಹಣ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಜಾವಿದ್ ಮಾಸ್ತಿ ಪೋಲಿಸ್ ಠಾಣೆಗೆ ದೂರು ನೀಡಿದ್ದು ಈ ಬಗ್ಗೆ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ರಾಮ್ನಿವಾಸ್ ಸಫಾಟ್, ಎ.ಎಸ್.ಪಿ ಜಮೀಲ್, ಡಿವೈಎಸ್ಪಿ ಕೆ. ಅಶೋಕ್ಕುಮಾರ್, ಮಾಲೂರು ಸರ್ಕಲ್ ಇನ್ಸೆಪೆಕ್ಟರ್ ಶಿವಕುಮಾರೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದರು. ಮಾಸ್ತಿ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದಪ್ಪ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.