ಅಗಲಗುರ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ
ಚಿಕ್ಕಬಳ್ಳಾಪುರ: ತಾಲೂಕಿನ ಅಗಲಗುರ್ಕಿಯ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘ ನಿಯಮಿತದ 2013-2018 ರ ಅವಧಿಗೆ ನಡೆದ ಚುನಾವಣೆಯಲ್ಲಿ ಕಾರ್ಯಕಾರಿ ಮಂಡಳಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಎ.ಎನ್. ಪ್ರಭಾಕರ್, ಉಪಾಧ್ಯಕ್ಷರಾಗಿ ಕೆ. ತಾಯಪ್ಪ (ಶ್ರೀನಿವಾಸ್), ಸದಸ್ಯರಾಗಿ ಪಿ. ನಾಗೇಶ್, ಆರ್. ನಾರಾಯಣಸ್ವಾಮಿ, ವೆಂಕಟಪತೆಪ್ಪ, ಲಕ್ಷ್ಮಯ್ಯ, ಕೆ. ಆನಂದ, ಚಿಕ್ಕಸಿದ್ದಪ್ಪ, ಸುಬ್ಬಮ್ಮ, ಕಾಮಾಕ್ಷಮ್ಮ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಆದ್ಯಕ್ಷ ಆರ್. ಚಂದ್ರಶೇಖರ್, ಗ್ರಾಮದ ಮುಖಂಡರಾದ ಎ.ಎನ್. ಕೃಷ್ಣಮೂರ್ತಿ, ಪಿ. ಪ್ರಭಾಕರ್, ಎಲ್. ಮಂಜುನಾಥ್(ಪಟೇಲ್), ಮುನಿಬೈರಪ್ಪ, ಶ್ರೀನಿವಾಸ್, ಮುನಿಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.