ಗೌರಿಬಿದನೂರು ಎಸ್ಬಿಎಂ ಶಾಖೆಗೆ ಶತಮಾನೋತ್ಸವ ಸಂಭ್ರಮ
ಗೌರಿಬಿದನೂರು: ಬ್ಯಾಂಕ್‌ಗಳು ತಮ್ಮ ಶಾಖೆಯು ಲಾಭಗಳಿಸಿ ಪ್ರಗತಿ ಸಾಧಿಸುವುದರ ಜೊತೆಗೆ ಜನತೆಯೂ ಲಾಭದಾಯಕವಾಗಿ ಮುನ್ನಡೆಯುವಂತಹ ಯೋಜನೆಗಳನ್ನು ನೀಡಬೇಕಾಗಿದೆ ಎಂದು ವಾಣಿಜ್ಯೋದ್ಯಮಿ ಎಸ್.ಎ.ಅಶ್ವತ್ಥನಾರಾಯಣ ಶೆಟ್ಟಿ ತಿಳಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯು ಆರಂಭವಾಗಿ 100 ವರ್ಷ ಪೂರೈಸಿದ ಸಂದರ್ಭದಲ್ಲಿ ಗೌರಿಬಿದನೂರು ಶಾಖೆಯಲ್ಲಿ ಕೇಕ್ ಕತ್ತರಿಸಿ ಉತ್ತಮ ಗ್ರಾಹಕರಿಗೆ ಕೃತಜ್ಞತೆಗಳನ್ನು ತಿಳಿಸಿದರು.
ಶಾಖಾ ವ್ಯವಸ್ಥಾಪಕ ಪಿವಿಆರ್ ರಂಗನಾಥ್ ಮಾತನಾಡಿ ಮುಂದಿನ ದಿನಗಳಲ್ಲಿ ಬ್ಯಾಂಕಿನಿಂದ ಗ್ರಾಹಕರಿಗೆ ದೊರೆಯಬಹುದಾದ ಎಲ್ಲಾ ವಿಧದ ಸವಲತ್ತುಗಳನ್ನು ಸರಳ ಮಾರ್ಗದಲ್ಲಿ ಸಿಗುವಂತೆ ಮಾಡಿ ಯೋಜನೆಗಳ ಪೂರ್ಣ ಲಾಭ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಉಪವ್ಯವಸ್ಥಾಪಕ ಸುನಿಲ್‌ಕುಮಾರ್, ಗ್ರಾಹಕ ಸುರೇಶ್‌ಕುಮಾರ್, ಭೂಷಣ್ ಹಾಗೂ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.