ಟೈರ್ಗಳಿಗೆ ಬೆಂಕಿ: ತಪ್ಪಿದ ಅನಾಹುತ
ಕೆಜಿಎಫ್: ಹೆಂಚಿನ ಮನೆಯಲ್ಲಿ ಹಾಕಿಟ್ಟಿದ್ದ ಹಳೇ ಸ್ಕಾರ್ಪ್ ಟೈಯರ್ಗಳಿಗೆ ಬೆಂಕಿ ಬಿದ್ದು ಕೂಡಲೇ ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿ ಬಂಕಿ ನಂದಿಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದ ಘಟನೆ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಇಸ್ಮೇಲ್ ಎಂಬವರಿಗೆ ಸೇರಿದ ಹೆಂಚಿನ ಮನೆಯಲ್ಲಿ ವಿವಿಧ ವಾಹನಗಳ ಹಳೇ ಟೈಯರ್ಗಳನ್ನು ಹಾಕಿಟ್ಟಿದ್ದರು. ಟೈಯರ್ಗಳಿಗೆ ಬೆಂಕಿ ಬಿದ್ದು ಉರಿಯುವಾಗ ಹೊಗೆ ಕಾಣಿಸಿಕೊಂಡಿದ್ದು ಗಾಭರಿಗೊಂಡ ಸಾರ್ವಜನಿಕರು ಕೂಡಲೇ ಸ್ಥಳಿಯ ಪೊಲೀಸ್ ಠಾಣೆಗೆ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಅಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆಂಡ್ರಸನ್ಪೇಟೆ ಬಸ್ ನಿಲ್ದಾಣದ ಮುಂಭಾಗದಲ್ಲೇ ಈ ದುರಂತ ಸಂಭವಿಸಿದ್ದು ಅಕ್ಕಪಕ್ಕದಲ್ಲಿ ಮನೆಗಳು, ಗ್ಯಾರೇಜ್ ಅಂಗಡಿಗಳು ಹಾಗೂ ಆಟೋ ನಿಲ್ದಾಣವಿದ್ದು ಹೆಚ್ಚಿನ ಆನಾಹುತವನ್ನು ತಪ್ಪಿಸಿದಂತಾಗಿದೆ. ಯಾವುದೇ ನಷ್ಟವುಂಟಾಗಿಲ್ಲ. ಘಟನಾ ಸ್ಥಳಕ್ಕೆ ವೃತ್ತನಿರೀಕ್ಷಕ ಲಕ್ಷ್ಮೀನಾರಾಯಣ, ಪಿಎಸ್ಐ ಎಲ್. ಆಂಜಪ್ಪ ಸೇರಿದಂತೆ ಇತರೆ ಸಿಬ್ಬಂದಿ ಹಾಜರಿದ್ದರು.