ತಾಲೂಕು ಪಂಚಾಯ್ತಿ ಉಪ ಚುನಾವಣೆ: ಕಾಂಗ್ರೆಸ್ ಗೆಲವು
ಶ್ರೀನಿವಾಸಪುರ: ತಾಲೂಕು ಪಂಚಾಯ್ತಿ ಸದಸ್ಯರೊಬ್ಬರ ಅಕಾಲ ಮರಣದಿಂದ ತೆರುವುಗೊಂಡಿದ್ದ ಸದಸ್ಯ ಸ್ಥಾನಕ್ಕೆ ಕಳೆದ ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥರೆಡ್ಡಿ ಜಯಗಳಿಸಿದ್ದಾರೆ.
ತಾಲೂಕಿನ ಪುಲಗೂರಕೋಟೆ ತಾಲೂಕು ಪಂಚಾಯ್ತಿ
ಸದಸ್ಯ ಜೆಡಿಎಸ್‌ನ ಗಂಗಾಧರಪ್ಪ ಕಳೆದ ವರ್ಷ ಕಾಯಿಲೆಯಿಂಂದಾಗಿ ಆಕಾಲ ಮರಣ ಹೊಂದಿದ್ದರು. ಈ ನಿಟ್ಟಿನಲ್ಲಿ ಕಳೆದ 29 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು ಕಾಂಗ್ರೆಸ್ ಸ್ಪರ್ಧಿಸಿದ್ದ ಕಸಬಾ ಹೋಬಳಿಯ, ಕಲ್ಲೂರು ಗ್ರಾಮದ ಕೆ.ಕೆ. ಮಂಜುನಾಥರೆಡ್ಡಿ ಜಯ ಸಾಧಿಸಿದ್ದಾರೆ.
ಕುತೂಹಲ ಕೆರಳಿಸಿದ್ದ ಈ ತಾಪಂ ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸಪುರ ಪಟ್ಟಣದ ಪಾತಪೇಟ ಎಸ್. ಎನ್. ಮಂಜುನಾಥರೆಡ್ಡಿಗಿಂತ 202 ಮತಗಳ ಅಂತರದಿಂದ ಕಾಂಗ್ರೆಸ್ ಕೆ.ಕೆ. ಮಂಜುನಾಥರೆಡ್ಡಿ ಜಯಗಳಿಸಿದರು. ಕಾಂಗ್ರೆಸ್‌ಗೆ 3293, ಜೆಡಿಎಸ್‌ಗೆ 3091 ಮತಗಳು ಲಭಿಸಿವೆ.