ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರು ಕಾಲೇಜಿನಲ್ಲಿ ಕಳವಿಗೆ ಯತ್ನ

Rashmi Kasaragodu
Updated On : 2 Oct 2013, 1:52 am

ಮಾಲೂರು: ಇಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಕಳ್ಳತನ ಮಾಡಿದ ದುಷ್ಕರ್ಮಿಗಳ ತಂಡವು ಚಿಕ್ಕಾಸು ಸಿಗದೆ ಬರೀಗೈಲಿ ವಾಪಸಾದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
   ಪಟ್ಟಣದ ಹೊರವಲಯದಲ್ಲಿರುವ ವೈಟ್ ಗಾರ್ಡನ್‌ನಲ್ಲಿರುವ ಮಾನಸ ಕಾಲೇಜ್ ಆಫ್ ನರ್ಸಿಂಗ್‌ಗೆ ಮಂಗಳವಾರ ಬೆಳಗಿನ ಜಾವ 2.30 ಗಂಟೆ ಸುಮಾರಿಗೆ ನುಗ್ಗಿದ ಕಳ್ಳರ ತಂಡ ಮೊದಲು ಕಾವಲುಗಾರ ಮಲಗಿದ್ದ ಕೋಣೆಯನ್ನು ಚಿಲಕ ಹಾಕಿ ಕಾಲೇಜಿನಲ್ಲಿದ್ದ ಕಚೇರಿಯ ನಾಲ್ಕು ಕೋಣೆಗಳ ಬಾಗಿಲನ್ನು ಮುರಿದು ಒಳ ಪ್ರವೇಶಿದರಲ್ಲದೇ ನಾಲ್ಕು ಕೋಣೆಗಳಲ್ಲಿದ್ದ 14 ಬೀರುಗಳ ಬಾಗಿಲನ್ನು ಹೊಡೆದು ನಗದು ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಸುಮಾರು 2 ಗಂಟೆ ಕಾಲ ಕಾರ್ಯಾಚರಣೆ ನಡೆಸಿದ ಕಳ್ಳರಿಗೆ ಯಾವುದೇ ಅಲಮೇರಾ ದಲ್ಲಿ ಒಂದು ಚಿಕ್ಕಾಸು ಸಿಗದೆ ವಾಪಾಸು ಹೋಗಿದ್ದಾರೆ. ಬೆಳಗ್ಗೆ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಮಲಗಿದ್ದ ಮುಖ್ಯ ಕಾವಲುಗಾರ ರಾಮು ಕೆಳಗಿಳಿದು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೆಳ ಅಂತಸ್ತಿನಲ್ಲಿ ಮಲಗಿದ್ದ ರಾಮು ವಿನ ಸಹೋದರ ನೇಪಾಳಿ ಹೀರಾ ಮಧ್ಯರಾತ್ರಿ 2 ಗಂಟೆ ವೇಳೆಯಲ್ಲಿ ಹೊರ ಬಂದಿದ್ದು ನಂತರ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ನೇಪಾಳಿ ಹೀರಾ ಮಲಗಿದ್ದ ಕೋಣೆಯನ್ನು ಕಳ್ಳರು ಚಿಲಕ ಹಾಕಿದ ಹಿನ್ನೆಲೆಯಲ್ಲಿ ಹೊರಬರಲಾಗದ ಹೀರಾ ಕಾಲೇಜು ಒಳಗಿನಿಂದ ಬೀರು ಹೊಡೆಯುವ ಸದ್ದು  ಹಾಗೂ ನಂತರ ದ್ವಿಚಕ್ರ ವಾಹನಗಳ ಸದ್ದು ಕೇಳಿರುವುದಾಗಿ ತಿಳಿಸಿದ್ದು, ಕಾಲೇಜಿನ ಲೆಕ್ಕಾಧಿಕಾರಿ ವೆಂಕಟರಾಮ್  ಸ್ಥಳೀಯ ಪೊಲೀಸರಿಗೆ  ಪ್ರಕರಣ  ಸಂಬಂಧ ದೂರು ನೀಡಿರುವುದಾಗಿ ತಿಳಿಸಿದ್ದಾರೆ.




ಹೊರವಲಯವನ್ನೇ ಗುರಿಯಾಗಿಸಿಕೊಂಡ ನಗದುಗಳ್ಳರು
 ಎರಡು ದಿನದಲ್ಲಿ ಎರಡನೇ ಕಳ್ಳತನ ಪ್ರಕರಣ ಮಾಲೂರು ಪಟ್ಟಣದಲ್ಲಿ ಸಂಭವಿಸಿದ್ದು, ಕಳ್ಳರು ಹೊರವಲಯವನ್ನೇ ಗುರಿ ಇಟ್ಟಿಕೊಂಡಿರುವುದು ಈ ಎರಡು ಪ್ರಕರಣಗಳಿಂದ ತಿಳಿದು ಬರುತ್ತದೆ. ಅದಲ್ಲದೇ ಈ ಕಳ್ಳರ ತಂಢ ಕೇವಲ ನಗದು ಹಣವನ್ನು ದೋಚುತ್ತಿದ್ದು, ಕಾಲೇಜು ಕಳ್ಳತನ ಪ್ರಕರಣದಲ್ಲಿ ಬೀರುಗಳಲ್ಲಿ 50 ಸಾವಿರ ರು.ಗಳ ಪ್ರೋಜೆಕ್ಚರ್ ಸೇರಿದಂತೆ ಇತರೆ ಮೌಲ್ಯದ ವಸ್ತುಗಳಿದ್ದರೂ ಅವುಗಳನ್ನು ಮುಟ್ಟದೆ ಹಾಗೆ ವಾಪಸು ಹೋಗಿದ್ದಾರೆ. ಹೊಸೂರು ರಸ್ತೆಯ ವಾಣಿಜ್ಯ ಸಂಕೀರ್ಣದ ಸರಣಿ ಕಳ್ಳತನದಲ್ಲೂ ಸಹ ಇತರೆ ವಸ್ತುಗಳನ್ನು ಮುಟ್ಟದೆ ನಗದು ಹಣವನ್ನು ಮಾತ್ರ ದೋಚಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement