ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತ ಸಂಘದ ವರ್ತನೆಗೆ ಶಾಸಕರ ಗರಂ

Rashmi Kasaragodu
Updated On : 2 Oct 2013, 1:52 am

ಬಂಗಾರಪೇಟೆ: ಕಳೆದ ಶುಕ್ರವಾರ ರೈತ ಸಂಘದವರು ಶಾಸಕ ಎಸ್.ಎನ್. ನಾರಾಯಣಸ್ವಾಮಿ ವೈಯಿಕ್ತಿಕ ವಿಚಾರಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದಕ್ಕೆ ಕೆಂಡಾಮಂಡಲರಾಗಿರುವ ಶಾಸಕರು ಮಂಗಳವಾರ ಹುದುಕುಳ ಗ್ರಾಮದ ಬಳಿ ರೈತ ಸಂಘದ ಕೆಲ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ತಾನು ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದರುವ ಕಾಮಗಾರಿಗಳಿಗೆ ಮರು ಜೀವ ನೀಡಲಾಗಿದೆ. ಅಲ್ಲದೆ ಕ್ಷೇತ್ರ ಜನರ ಸಮಸ್ಯೆಗಳಿಗೆ ಸ್ವಂದಿಸುವ ಮೂಲಕ ಜನಪ್ರಿಯೆವಾಗುತ್ತಿರುವುದನ್ನು ಸಹಿಸಲಾಗದೆ ಕೆಲವರು ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡು ವರ್ತಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.
 ಈ ಬಗ್ಗೆ ಕೋಲಾರ ಶಾಸಕ ವರ್ತೂರು ಪ್ರಕಾಶ್ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ರೈತ ಸಂಘದವರನ್ನು ರೋಲ್‌ಕಾಲ್ ಮುಖಂಡರು ಎಂದು ಜರಿದಿದ್ದರೂ ಚಕಾರವೆತ್ತದೆ ನನ್ನ ಚಾರಿತ್ರ್ಯಕ್ಕೆ ದಕ್ಕೆ ಬರುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಶಾಸಕರಾಗಿ ಆಯ್ಕೆಯಾದ ನಾಲ್ಕು ತಿಂಗಳಲ್ಲಿ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯರಗೋಳ್ ಯೋಜನೆಗೆ ಮರು ಜೀವ ನೀಡಿಲಾಗಿದೆ. ಮಿನಿ ವಿಧಾನಸೌಧ ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಲಾಗಿದೆ.
 ಕೆರೆಗಳಲ್ಲಿ ಹೂಳೆತ್ತುವ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಇಷ್ಟೆಲ್ಲಾ ಅಭಿವೃದ್ಧಿ ಕೆಸಲಗಳನ್ನು ಮಾಡುತ್ತಿದ್ದರೂ ಪ್ರತಿಭಟನೆ ಹಾಸ್ಯಸ್ಪದವಾಗಿದೆ ಇನ್ನಾದರೂ ರೈತರು ರೈತರ ಸಮಸ್ಯೆಗಳಿಗೆ ಹೋರಾಟ ಮಾಡುವುದನ್ನು ಕಲಿಯಲಿ ಎಂದು ಬುದ್ದಿವಾದ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement