ವಿದ್ಯಾರ್ಥಿ ದಿಸೆಯಲ್ಲೇ ಪರಿಸರ ಕಾಳಜಿ ಬೆಳೆಯಲಿ'
ಮಾಲೂರು: ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಇದ್ದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ವಾತವರಣ ಮೂಡಲು ಸಾಧ್ಯ ಎಂದು ಉದ್ಯಮಿ ಎಂ.ವಿ.ವೇಮನ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.
ಕಿತ್ತೂರು ರಾಣಿ ವಸತಿ ಶಾಲೆಗೆ ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ಅವ್ಯವಸ್ಥೆಯು ಶೈಕ್ಷಣಿಕ ವಾತವರಣಕ್ಕೆ ಅಡಚಣೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ಪ್ರಿಸ್ಟೇಜ್ ಗ್ರೂಪ್ಸ್ವತಿಯಿಂದ ವಸತಿ ಶಾಲೆಗೆ ನೀರಿನ ವ್ಯವಸ್ಥೆಗಾಗಿ ಪೈಪು ಲೈನ್ ಆಳವಡಿಸುವ ಜತೆಯಲ್ಲಿ ಬಿಸಿ ನೀರಿಗಾಗಿ ಸೋಲಾರ್ ಹಾಗೂ ವಾಟರ್ ಫೀಲ್ಟರ್ ಆಳವಡಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಗ್ರೂಪ್ಸ್ನಿಂದ ವಸತಿ ಶಾಲೆಯ 114 ವಿದ್ಯಾರ್ಥಿನಿಯರಿಗಾಗಿ ನೀರಿನ ಜಗ್ಗು, ಲೋಟಗಳನ್ನು ವಿತರಿಸಲಾಯಿತು. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲೆ ಉಮಾದೇವಿ, ಪ್ರೇಸ್ಟೀಜ್ ಗ್ರೂಪ್ಸ್ನ ಬಾಲಾಜಿ ಸಿಂಗ್, ಅಶ್ವಥ್ಗೌಡ, ಸತ್ಯನಾರಾಯಣ್, ಅಪ್ಸರ್ಖಾನ್, ಬ್ಯಾಂಕ್ ತ್ಯಾಗರಾಜ್, ಎಂ.ವಿ.ರವಿಂದ್ರ, ವಿ.ರಾಜಗೋಪಾಲ್, ಈಶ್ವರ್,ರಶೀದ್ಖಾನ್, ಗುಟ್ಟಸ್ವಾಮಿ, ವೆಂಕಟೇಶ್,ಬಿ.ಎಸ್.ಕುಮಾರ್ ಇದ್ದರು.