ವಿವಿಧ ಯೋಜನೆಗೆ ಭೂಮಿ ಮಂಜೂರು
ಗುಡಿಬಂಡೆ: ತಾಲೂಕಿನ ಪಲ್ಲಯ್ಯನಗಾರಹಳ್ಳಿಯಲ್ಲಿ ಬಸ್ ಡಿಪೋ ಮತ್ತು ಪ್ರಾದೇಶಿಕ ಕಾರ್ಯಾಗಾರ ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡಕ್ಕೆ ಒಟ್ಟು 10 ಎಕರೆ ಭೂಮಿ ನೀಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಸಬಾ ಹೋಬಳಿ ಪಲ್ಲಯ್ಯಗಾರಿಹಳ್ಳಿ ಸ.ನಂ.171 ಪಿ1 ರಲ್ಲಿ 8.10 ಎಕರೆ ಹಾಗೂ ಕೊಂಡರೆಡ್ಡಿಹಳ್ಳಿ ಗ್ರಾಮದ ಸ.ನಂ 13ರಲ್ಲಿ 1.30 ಎಕರೆ ಭೂಮಿಯಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಸಂಬಂಧ ಸಾರಿಗೆ ಸಂಸ್ಥೆಗೆ ಕಂದಾಯ ಇಲಾಖೆ ನಿಗದಿಪಡಿಸಿರುವ ಸುಮಾರು ರು. 8ಲಕ್ಷ ಪಾವತಿಸಿ ಜಮೀನನ್ನು ತನ್ನ ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಸಂಸ್ಥೆ ಚಾಲನೆ ನೀಡಬೇಕಾಗಿದೆ.
ವಾಬಸಂದ್ರ ಬಳಿ ಅಗ್ನಿಶಾಮಕ ದಳದ ಘಟಕ ಸ್ಥಾಪಿಸಲು ಸ.ನಂ. 199ರಲ್ಲಿ 1 ಎಕರೆ ಭೂಮಿ ಮಂಜೂರಾಗಿದ್ದು, ಸುಮಾರು ರು. 3.20 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು ಪ್ರಗತಿಯಲ್ಲಿದೆ. ಅಮಾನಿ ಬೈರಸಾಗರದ ನೀರು ಶುದ್ದೀಕರಣ ಘಟಕದ ಸಮೀಪ ಅರಣ್ಯ ಇಲಾಖೆಯ ಕಚೇರಿ ನಿರ್ಮಿಸಲು ಸ.ನಂ. 251ರಲ್ಲಿ 1 ಎಕರೆ ಭೂಮಿ ಮಂಜೂರಾಗಿದೆ. ಸದಸ್ಯದಲ್ಲೇ ಪ್ರಕ್ರಿಯೆ ನಡೆಯಲಿದೆಯೆಂದು ಮೂಲಗಳು ತಿಳಿಸಿವೆ.