ಹಿರಿಯರನ್ನು ಗೌರವಿಸುವುದು ಕರ್ತವ್ಯ: ನ್ಯಾ. ಓಂಕಾರಮೂರ್ತಿ
ಮುಳಬಾಗಲು: ಹಿರಿಯ ನಾಗರಿಕರನ್ನು ಗೌರವಿಸುವುದು ಸಾಮಾಜಿಕ ಕರ್ತವ್ಯವಾಗಿದೆ ಎಂದು ಮುಳಬಾಗಲು ನ್ಯಾಯಾಧೀಶ ಓಂಕಾರಮೂರ್ತಿ ಪಟ್ಟಣದ ನೌಕರರ ಭವನದಲ್ಲಿ ಮಂಗಳವಾರ ತಾಲೂಕು ಕಾನೂನು ನೆರವು ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆಡಳಿತದ ವತಿಯಿಂದ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ನಿವೃತ್ತ ನೌಕರರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ತಾಂತ್ರಿಕ ಯುಗದಲ್ಲಿ ವಯೋವಾನದ ವಯಸ್ಸು, ಸಡಿಲಗೊಂಡಿದೆ ಆರವತ್ತರ ನಂತರವೂ ಚುರುಕಾಗಿ ಕೆಲಸ ನಿರ್ವಹಿಸುವವರ ಸಂಖ್ಯೆ ಏರಿದೆ ಎಂದರು. ಹಿರಿಯ ನಾಗರಿಕರಿಗೂ ಅವರ ಅನುಭವಕ್ಕೆ ತಕ್ಕಂತೆ ಉದ್ಯೋಗವಕಾಶಗಳು ದೊರೆಯುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಅಪರ ನ್ಯಾಯಾಧೀಶ ಎನ್.ರಾಜು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಪ್ರಭಾಕರ್, ತಹಸೀಲ್ದಾರ್ ಡಿ.ವಿ.ರಾಮಮೂರ್ತಿ ಮಾತನಾಡಿದರು. ಕೆ.ಎಂ.ನಾರಾಯಣಸ್ವಾಮಿ, ಕಾರ್ಯದರ್ಶಿ ಎಂ.ನಂಜುಂಡಪ್ಪ. ತಾಲೂಕು ವಕೀಲರ ಸಂಘದ ಮಾಜಿ ಮಾಜಿ ಅಧ್ಯಕ್ಷ ಎನ್.ಪ್ರಭಾಕರ್, ಮಂಜುನಾಥ್.ಜಯಪ್ಪ, ಶ್ರೀನಿವಾಸರೆಡ್ಡಿ ಮುಂತಾದವರು ಭಾಗವಹಿಸಿದ್ದರು.