ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹೆತ್ತವರ ಪೋಷಣೆಗೆ ವಿದ್ಯಾವಂತರಿಂದಲೇ ಹಿಂಜರಿಕೆ

Rashmi Kasaragodu
Updated On : 2 Oct 2013, 1:56 am

ಚಿಕ್ಕಬಳ್ಳಾಪುರ: ಸದೃಢರಾಗಿದ್ದರೂ ಬಹುತೇಕ ವಿದ್ಯಾವಂತರೇ ಹೆಚ್ಚು ಹೆತ್ತ ತಂದೆ, ತಾಯಿಗಳನ್ನು ಪೋಷಿಸಲು ಹಿಂಜರಿಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ. ಈರಣ್ಣವರ್ ಅಭಿಪ್ರಾಯಪಟ್ಟರು.
ನಗರದ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆ,ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸುಲ್ತಾನಪೇಟೆಯ ಶ್ರೀ ಸಾಯಿ ದ್ವಾರಕಮಾಯಿ ವೃದ್ಧಾಶ್ರಮ, ಚಿಂತಾಮಣಿಯ ಶ್ರೀ ವಿಷ್ಣು ವೃದ್ಧಾಶ್ರಮ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಸನಾತನ ಸಂಸ್ಕೃತಿಯು ಗುರು ಹಿರಿಯರನ್ನು,ತಂದೆ ತಾಯಿಗಳನ್ನು ಪೂಜ್ಯ ದಣಷ್ಟಿಯಿಂದ ಕಾಣಬೇಕೆಂಬ ಅಂಶವನ್ನು ಪ್ರತಿಪಾದಿಸಿಕೊಂಡು ಬಂದಿದೆ.ಹಿರಿಯರನ್ನು ಗೌರವಿಸುವಂತಹ ಮನೋಭಾವನೆಯನ್ನು ಪ್ರತಿಯೊಬ್ಬರು ಹೊಂದಿರಬೇಕೆಂದರು.
ಹಿರಿಯ ವಕೀಲ ನರಸಿಂಹಮೂರ್ತಿ ಮಾತನಾಡಿ, ಯಾರು ಇತರರನ್ನು ಪ್ರೀತಿಯಿಂದ ಕಾಣುತ್ತಾರೋ ಅವರ ಆಯಸ್ಸು ಹೆಚ್ಚುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮಾನವೀಯ ಮೌಲ್ಯಗಳು, ಆದರ್ಶ ತತ್ವಗಳನ್ನು ಬೆಳೆಸಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ನಡೆಸುವಂತೆ ಮಾಡಬೇಕೆಂದ ಅವರು, ಹಿರಿಯ ನಾಗರಿಕರಿಗೆ ತಮ್ಮದೇ ಆದ ವ್ಯಕ್ತಿತ್ವ ಕನಸುಗಳು ಇರುತ್ತದೆ. ಇದಕ್ಕೆ ಮನ್ನಣೆ ಸಿಗಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ.ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ನಮ್ಮ ಸಂಸ್ಕೃತಿಗೆ ಒಂದು ಪರಂಪರೆ ಇದೆ.ಎಲ್ಲಾ ದೇಶಗಳಲ್ಲಿ ಹಿರಿಯರಿಗೆ ಗೌರವ ಸಲ್ಲಬೇಕು. ಮೊದಲು ನಾವು ನಮಗಿಂತ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಈ ಪರಿಪಾಠ ಶಾಲೆಗಳಿಂದಲೇ ಪ್ರಾರಂಭವಾಗಬೇಕು. ವಯಸ್ಸಾದವರನ್ನು ಕೀಳಾಗಿ ಕಂಡರೆ ನಾವು ನಮ್ಮ ವ್ಯಕ್ತಿತ್ವ, ಸಂಸ್ಕೃತಿಗೇ ಅಗೌರವ ತೋರಿಸಿದಂತೆ ಎಂದರು.
ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಅಮರನಾರಾಯಣ, ನಳಿನಿ, ವಕೀಲರ ಸಂಘದ ಅಧ್ಯಕ್ಷ ತಮ್ಮೇಗೌಡ, ಲೋಕಾಯುಕ್ತ ಸರ್ಕಾರಿ ಅಭಿಯೋಜಕ ಎನ್. ರಘುರಾಂ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕಿ ಸುರೇಖಾ ವಿಜಯಪ್ರಕಾಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಜಿತ್‌ಪ್ರಸಾದ್, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕ ಕಲ್ಯಾಣಾಧಿಕಾರಿ ಶಾಂತರಸ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement