ಕಾಲಮಿತಿಯಲ್ಲಿ ನೀರಾವರಿ ಯೋಜನೆ ಜಾರಿಗೆ ಒತ್ತಾಯ
ಕೋಲಾರ: ಬರಪೀಡಿತ ಬಯಲು ಸೀಮೆಯ ಜಿಲ್ಲೆಗಳಿಗೆ ಡಾ. ಪರಮಶಿವಯ್ಯನವರ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆಯನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು. ಎತ್ತಿನಹೊಳೆ ಯೋಜನೆಯನ್ನು ಕಾಲುವೆಗಳ ಮುಖಾಂತರ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ನಗರದ ಗಾಂಧಿವನದಲ್ಲಿ ಸಾಂಕೇತಿಕ ಧರಣಿ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಮೂರಂಡಹಳ್ಳಿ ಶಿವಾರೆಡ್ಡಿ ಮಾತನಾಡಿ,ಜಿಲ್ಲೆಯ ಕೆರೆಗಳಲ್ಲಿ ಹೂಳು ತೆಗೆವುದು, ಒತ್ತುವರಿಯನ್ನು ತೆರವುಗೊಳಿಸಬೇಕು. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸದೆ ಹೋದರೆ ಇಡೀ ಬಯಲು ಸೀಮೆ ಜನರು ಆತ್ಮಹತ್ಯೆ ಕಡೆ ಮುಖ ಮಾಡಬೇಕಾಗುವ ಪರಿಸ್ಥಿತಿ ಎಂದಾರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಧರಣಿಯಲ್ಲಿ ಹೂಹಳ್ಳಿ ನಾಗರಾಜ್, ಹುಲ್ಕುರು ಹರಿಕುಮಾರ್, ರಂಜಿತ್ ಕುಮಾರ್, ಬಂಗೋದಿ ನಾಗರಾಜ ಗೌಡ, ಶ್ರೀನಾಥ್, ನರಸಾಪುರ ಪುರುಷೋತ್ತಮ್, ಕಾರಿ ವಿಶ್ವನಾಥ್, ಕ್ಯಾಸಂಬಳ್ಳಿ ಪ್ರತಾಪ್, ಎಸ್.ಎಂ. ಕೃಷ್ಣಮೂರ್ತಿ, ಮಂಜುನಾಥ್ ರೆಡ್ಡಿ, ನವೀನ್, ಈಕಂಬಳ್ಳಿ ಮಂಜುನಾಥ, ತೆರನಹಳ್ಳಿ ವೆಂಕಟೇಶಗೌಡ, ನಿಲಕಂಠಪುರ ಮುನೇಗೌಡ, ಗೊಟುಕುಂಟೆ ಕೃಷ್ಣ, ಆನಂದ್ ಸಾಗರ್, ಹೆಬ್ಬಣಿ ಆನಂದ್ ರೆಡ್ಡಿ, ಸೀನಪ್ಪ, ವಿಕ್ರಂ, ಕರಗ ನಾರಾಯಣ ಸ್ವಾಮಿ ಭಾಗವಹಿಸಿದ್ದರು.