ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗ್ರಾಮೀಣ ಅಭಿವೃದ್ಧಿಗೆ ಖಾತ್ರಿ ವರದಾನ

Rashmi Kasaragodu
Updated On : 3 Oct 2013, 1:00 am

ಬಾಗೇಪಲ್ಲಿ: ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದಾಗ ಗಾಂಧಿಜೀ ಕಂಡಿದ್ದ ಕನಸು ನನಸಾಗುತ್ತದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಭಿಪ್ರಾಯ ಪಟ್ಟರು.
ತಾಲೂಕಿನ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ಯೋಜನೆಯಡಿ ಮಾಮಡವಂಕಲ ಕುಂಟೆಯ ಪುನಶ್ಚೇತನ ಕಾಮಾಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಬಾಗೇಪಲ್ಲಿ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದ್ದು, ಕೇಂದ್ರ ಸರ್ಕಾರದ ಖಾತ್ರಿ ಯೋಜನೆ ಕ್ಷೇತ್ರಕ್ಕೆ ವರದಾನವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.  ಸಾವಿತ್ರಮ್ಮ ಮಾತನಾಡಿ, ಮಳೆಯಾದರೆ ಮಾತ್ರ ನೀರು ಶೇಖರಣೆಯಾಗಲು ಸಾಧ್ಯ. ಆದರೆ ಮಳೆಯೇ ಇಲ್ಲದಿರುವಾಗ ಕೆರೆ, ಕುಂಟೆಗಳನ್ನು ಪುನಶ್ಚೇತನ ಮಾಡುವುದರಿಂದ ಪ್ರಯೋಜನವಿಲ್ಲ. ಶಾಶ್ವತ ನೀರಾವರಿ ಯೋಜನೆಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಧ್ವನಿ ಎತ್ತಬೇಕೆಂದರು. ಜಿಪಂ ಸದಸ್ಯೆ ಅಮರಾವತಿ, ತಾಪಂ ಸದಸ್ಯ ಗೋಪಾಕೃಷ್ಣ, ಪರಗೋಡು ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ವೆಂಕಟಲಕ್ಷಮ್ಮ, ಇಓ ಶ್ರೀನಿವಾಸ್, ಪಿ.ವಿ. ನಾಗಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement