ಮಹಾತ್ಮಗಾಂಧೀಜಿ ಆದರ್ಶ ಪಾಲಿಸಲು ಕರೆ
ಕೋಲಾರ: ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆ ಕಾಪಾಡಲು ಪ್ರತಿಯೊಬ್ಬರು ಮಹಾತ್ಮಗಾಂಧೀಜಿಯವರ ಆದರ್ಶ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಕರೆ ನೀಡಿದರು.
ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ವಾರ್ತಾ ಇಲಾಖೆ ಆಶ್ರಯದಲ್ಲಿ ಬುಧವಾರ ನಗರದ ಗಾಂಧಿ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿಯವರ 145ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಇದೇ ಸಂದರ್ಭದಲ್ಲಿ ಅವರು ವಾರ್ತಾ ಇಲಾಖೆಯಿಂದ ಗಾಂಧಿ ಕುರಿತು ಹೊರ ತಂದಿರುವ ಸಿಡಿ, ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರಲ್ಲದೆ, ಮಕ್ಕಳಿಗೆ ಬಿಸಿ ಹಾಲಿನ ವಿತರಣೆ ಮಾಡಿದರು.
ಚಿನ್ಮಯ ಶಾಲೆಯ ಮಕ್ಕಳಿಂದ ಭಗವದ್ಗೀತೆ, ಮಹಮ್ಮದ್ ಉನ್ಮಾನ್ರವರಿಂದ ಖುರಾನ್ ಹಾಗೂ ರೆ. ಪಾಧರ್ ಧೂಳಪ್ಪನವರಿಂದ ಬೈಬಲ್ ಪಠಣವಾಯಿತು.
ಭಾರತ್ ಸೇವಾ ದಳದ ಜಿಲ್ಲಾ ಸಂಘಟಕ ಮಂಜುನಾಥ್ ಅವರು ದೇಶ ಭಕ್ತಿ ಗೀತೆ ಹಾಗೂ ಗಾಂಧೀಜಿಯವರಿಗೆ ಪ್ರಿಯವಾದ ಭಜನೆಯನ್ನು ಹಾಡಿದರು.
ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ, ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀನಾರಾಯಣಮೂರ್ತಿ, ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ, ಜಿಲ್ಲಾ ಎಸ್ಪಿ ಡಾ. ರಾಮ್ನಿವಾಸ್ ಸಪಟ್, ಮಂಜುನಾಥ್, ತಾಪಂ ಇಒ ಕೆ.ಎಸ್. ಭಟ್, ಡಿಡಿಪಿಐ ಪದ್ಮನಾಭ್, ತಹಸೀಲ್ದಾರ್ ನಾಗರಾಜು, ಕೂಡಾ ಆಯುಕ್ತ ನಾಗರಾಜಗೌಡ, ನಗರಸಭೆ ಆಯುಕ್ತ ಜಗದೀಶ್, ನಗರಸಭೆ ಸದಸ್ಯ ಮುರಳಿಗೌಡ, ಕೈಗಾರಿಕೆ ಇಲಾಖೆಯ ರವೀಂದ್ರ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಂಗಾರೆಡ್ಡಿ, ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಮರಿಸ್ವಾಮಿ ಹಾಗೂ ವಿವಿಧ ಶಾಲೆಗಳ ಮಕ್ಕಳು ಇದ್ದರು.