ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಅನಂತಮೂರ್ತಿ ಸಾರ್ವಜನಿಕ ಕ್ಷಮೆ ಯಾಚಿಸಬೇಕು'

Rashmi Kasaragodu
Updated On : 4 Oct 2013, 12:29 pm

ಬಾಗೇಪಲ್ಲಿ: ಬ್ರಾಹ್ಮಣರು ಗೋ ಮಾಂಸ ಭಕ್ಷಕರು ಎಂದು ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಯು.ಆರ್. ಅನಂತಮೂರ್ತಿಯವರು ತಕ್ಷಣ ತಮ್ಮ ಹೇಳಿಕೆ ವಾಪಸ್ ಪಡೆದು ಬ್ರಾಹ್ಮಣ ಸಮಾಜದವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ರಘುವೀರ ಶರ್ಮ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ಬ್ರಾಹ್ಮಣರ ಪಾತ್ರ ಪ್ರಮುಖವಾದುದು. ಸಮಾಜದ ಹಿತ ಕಾಯುವುದರಲ್ಲಿ ಬ್ರಾಹ್ಮಣರು ಅಗ್ರಸ್ಥಾನದಲ್ಲಿದ್ದಾರೆ. ಇಂತಹ ಬ್ರಾಹ್ಮಣ ಸಮಾಜದ ಬಗ್ಗೆ ಅನಂತಮೂರ್ತಿಯವರು ಅವಹೇಳನಕಾರಿಯಾಗಿ ಮಾತನಾಡಿರುವುದು ಬೇಸರ ತಂದಿದೆ ಎಂದರು.
ಇತ್ತೀಚಿಗೆ ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ಈ ದೇಶದಲ್ಲಿ ಇರುವುದಿಲ್ಲ, ಎಂದು ಹೇಳಿಕೆ ನೀಡುವ ಮೂಲಕ ರಾಜಕಾರಣದಿಂದ ಲಾಭ ಪಡೆಯಲು ಯತ್ನಿಸಿದರು. ಸಾಹಿತಿಗಳಾಗಿರುವವರು ಒಂದು ಸಮುದಾಯದ ಬಗ್ಗೆ, ವ್ಯಕ್ತಿಗಳು ಬಗ್ಗೆ ಇಂತಹ ಹೇಳಿಕೆ ನೀಡಬಾರದೆಂದು ಆಗ್ರಹಿಸಿದರು. ತಾಲೂಕು ಬ್ರಾಹ್ಮಣರ ಮಹಾ ಸಭಾ ಉಪಾಧ್ಯಕ್ಷ ಹನುಮೇಶ್, ಕಾರ್ಯದರ್ಶಿ ವೆಂಕಟರಾವ್, ಖಜಾಂಚಿ ಮುನಿರಾಮಯ್ಯ, ಪಿ.ಎನ್.ನಂಜುಂಡರಾವ್, ವೇಣು, ಸೀತಾರಾಮಯ್ಯ, ರವೀಂದ್ರರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement