ಖಾತ್ರಿ ಸಮರ್ಪಕ ಅನುಷ್ಠಾನವಾಗಲಿ
ಮಾಲೂರು: ಗ್ರಾಮೀಣ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಡೆ ಗ್ರಾಮಸ್ಥರು ಗಮನ ನೀಡಬೇಕು ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ತಾಲೂಕಿನ ನೂಸಗೆರೆ ಪಂಚಾಯ್ತಿ ವ್ಯಾಪ್ತಿಯ ಹುರಳಗೆರೆ ಗ್ರಾಮದಲ್ಲಿ ಖಾತ್ರಿ ಯೋಜನೆಯಡಿ ಹತ್ತು ಲಕ್ಷ ರು.ವೆಚ್ಚದಲ್ಲಿ ಕೆರೆ, ರಾಜ ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಯೋಜನೆಯಡಿ ಗ್ರಾಮವನ್ನು ಸರ್ವತೋಮುಖ ಅಭಿವೃದ್ಧಿ ಮಾಡಬಹುದಾಗಿರುವುದರಿಂದ ಗ್ರಾಮಸ್ಥರು ಉತ್ತಮ ಕಾಮಗಾರಿ ನಡೆಯುವಂತೆ ನೋಡಿ ಕೊಳ್ಳುವ ಜವಾಬ್ದಾರಿಯನ್ನು ಹೂರಬೇಕು ಎಂದರು. ಜಿಪಂ ಸದಸ್ಯೆ ಯಲ್ಲಮ್ಮ ಸಂಪಂಗಿ, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಭಾಗ್ಯಮ್ಮ, ನಂಜೇಗೌಡ, ಚಂದ್ರೇಗೌಡ, ಬಿ.ವಿ.ಪಾಪಣ್ಣ, ಎಚ್. ಹನುಮಂತಪ್ಪ ಇದ್ದರು.