ಗುಣ ಮಟ್ಟದ ಹಾಲು: ಅರಿವು ಶಿಬಿರ
ಚಿಂತಾಮಣಿ: ಹಾಲು ಶೇಖರಣೆ ಪ್ರಮಾಣ ಹೆಚ್ಚಿಸುವುದು ಮತ್ತು ಗುಣ ಮಟ್ಟದ ಹಾಲು ಉತ್ಪಾದನೆ ಅವಶ್ಯಕತೆ ಬಗ್ಗೆ ರೈತರಿಗೆ ಡಾ. ರಾಘವೇಂದ್ರ ಉಪನ್ಯಾಸ ನೀಡಿದರು.
ತಾಲೂಕಿನ ಚಿಕ್ಕಬೊಮ್ಮನಹಳ್ಳಿ, ಬುಕ್ಕನಹಳ್ಳಿ, ಶ್ಯಾಮರಾವ್ ಹೊಸಪೇಟೆ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘ ಸದಸ್ಯರಿಗೆ ರಾಷ್ಟ್ರೀಯ ಹೈನುಯೋಜನೆ ಯಡಿ ಗ್ರಾಮೀಣ ಆಧಾರಿತ ಹಾಲು ಶೇಖರಣಾ ವ್ಯವಸ್ಥೆ ಉಪ ಯೋಜನೆಯಡಿ ಹೈನುಗಾರಿಕೆಯಲ್ಲಿ ಲಾಭದ ಜೊತೆಗೆ ಶುದ್ಧ ಹಾಲು ಉತ್ಪಾದನೆ ಬಗ್ಗೆ ಅರಿವು ಮೂಡಿಸಿದರು