ಪೊಲೀಸರ ವೈಪಲ್ಯ: ಬಿಜೆಪಿ ಆರೋಪ
ಚಿಂತಾಮಣಿ: ತಾಲೂಕಿನಲ್ಲಿ 15 ಭೂಮಾಫಿಯಾಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲಗೊಂಡಿರುವುದಾಗಿ ತಾಲೂಕು ಬಿಜೆಪಿ ಪದಾಧಿಕಾರಿಗಳು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಪ್ರಾಧಿಕಾರದ ಅಧ್ಯಕ್ಷ ನಾ. ಶಂಕರ್ ಮಾತನಾಡಿ, ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್ 15 ಜನ ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ತಮಗೆ ಸಂಬಂಧವೇ ಇಲ್ಲವಂತೆ ವರ್ತಿಸುತ್ತಿರುವುದು ಸಾಮಾನ್ಯರಲ್ಲಿ ಅನುಮಾನ ಮೂಡಿಸಿದೆ ಎಂದರು.
ಬತ್ತಲಹಳ್ಳಿ ಶ್ರೀನಿವಾಸ್, ನಗರಸಭಾ ಸದಸ್ಯ ಸುಜಾತಮ್ಮ ಶಿವಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಅಟ್ಟೂರು ಮಂಜುನಾಥ್, ನಗರ ಘಟಕದ ಅಧ್ಯಕ್ಷ ಮಹೇಶ್, ಮಾಡಿಕೆರಿ ಅರುಣ್ ಕುಮಾರ್ ಇದ್ದರು.