ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭಾರತ-ಪಾಕ್ ಗಡಿಗೆ ಬೈಕ್‌ನಲ್ಲಿ ಹೊರಟ ಕೆಜಿಎಫ್‌ನ ಪಾರ್ಥಿಬನ್

Rashmi Kasaragodu
Updated On : 4 Oct 2013, 12:29 pm

ಕೆಜಿಎಫ್: ಭಾರತ-ಪಾಕಿಸ್ತಾನ ಗಡಿಗೆ ಸ್ನೇಹ ಮತ್ತು ಶಾಂತಿ ಸಂದೇಶ ರಾವಾನಿಸಲು ಕೆಜಿಎಫ್‌ನ ಬೆಮೆಲ್ ಕಾರ್ಖಾನೆ ಉದ್ಯೋಗಿ ಎ. ಪಾರ್ತಿಬನ್ ಎಂಬವರು ಕೆಜಿಎಫ್ ನಗರದ ಗಾಂಧಿ ವೃತ್ತದಿಂದ ಬುಧವಾರ ಬೆಳಗ್ಗೆ 9ಕ್ಕೆ ಬೈಕ್ ಮೂಲಕ ಚಾಲನೆ ನೀಡಿದರು.
ಪಾಥಿಂಬನ್ ಶ್ರೀಲಂಕದಲ್ಲಿ ನಡೆದ ಅಥ್ಲೆಟಿಕ್‌ನಲ್ಲಿ ಪಾಲ್ಗೊಂಡು ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. 2008ರಲ್ಲಿ ಏಡ್ಸ್ ಬಗ್ಗೆ ಅರಿವು ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ದೆಹಲಿಯ ವರೆಗೆ ಬೈಕ್ ರ್ಯಾಲಿ ನಡೆಸಿದ್ದರಲ್ಲದೆ, ದೇಶದಲ್ಲಿ ಒಗ್ಗಟ್ಟು ಮತ್ತು ಶಾಂತಿ ಕಾಪಾಡಲು ಜಾಗೃತಿ ಮೂಡಿಸಲು ಚೆನ್ನೈ, ಮುಂಬಾಯಿ, ಕೊಲ್ಕತ್ತಾ, ದೆಹಲಿಯಿಂದ ಲೇಹ್-ಲಡಕ್(ಹಿಮಾಲಯ) ಸೇರಿದಂತೆ ದೇಶದ ಇತರೆ ಪ್ರಮುಖ ನಗರಗಲ್ಲಿ ಬೈಕ್ ರ್ಯಾಲಿ ನಡೆಸಿದ್ದಾರೆ. ಈ ವರ್ಷ ಭಾರತ-ಪಾಕಿಸ್ತಾನ ಗಡಿಯ ವಾಗಾ ಬಾರ್ಡರ್‌ಗೆ ಸ್ನೇಹ ಮತ್ತು ಶಾಂತಿ ಕಾಪಾಡುವ ಸಂದೇಶ ರವಾನಿಸಲು ಕೆಜಿಎಫ್‌ನಿಂದ ಬೈಕ್ ಮೂಲಕ ಹೊರಟರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಪೋಲಿಯೋ ಮುಕ್ತ ದೇಶವನ್ನಾಗಿ ಮಾಡಲು ಇವರ ಮೂಲಕ ಸಂದೇಶ ರವಾನಿಸಲಾಯಿತು. ಡಾ. ಸೆಂದಿಲ್, ಪ್ರಸನ್ನ, ಗೋವಿಂದರಾಜು, ರಾಘವೇಂದ್ರ, ರಾಮಕೃಷ್ಣ, ಬಾಲಾಜಿ, ಗೋಪಿನಾಥ್, ಡಾ. ಮೌನಿ, ಡಾ. ರಘುನಾಥ್, ಜಯಶಂಕರ್, ಮಂಜುನಾಥ್‌ರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement