ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಹಿಳೆ ಮೇಲೆ ಅತ್ಯಾಚಾರ ಯತ್ನ

Rashmi Kasaragodu
Updated On : 4 Oct 2013, 12:26 pm

ಕೆಜಿಎಫ್: ಬಹಿರ್ದೆಸೆಗೆ ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ಕೆಜಿಎಫ್ ಕ್ಷೇತ್ರದ ಬೇತಮಂಗಲ ಗ್ರಾಮದಲ್ಲಿ ನಡೆಡಿದೆ.  ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲೂರು ಗ್ರಾಮದ ನಿವಾಸಿ ರಮೇಶ್ಬಾಬು ಎಂಬುವರ ಪತ್ನಿ ಮುನಿಯಪ್ಪ ಎಂಬುವರಿಗೆ ಸೇರಿದ ನೀಲಗಿರಿ ತೋಪಿನಲ್ಲಿ ಬಹಿರ್ದೆಸೆಗೆಂದು ಹೋಗಿದ್ದಾಗ ಅದೇ ಗ್ರಾಮದ ನಿವಾಸಿ ಪ್ರವೀಣ್ ಎಂಬುವನು ತೋಪಿನಲ್ಲಿ ಅವಿತುಕೊಂಡಿದ್ದು ಹಿಂದಿನಿಂದ ಹೋಗಿ ಮಹಿಳೆಯನ್ನು ಎಳೆದಾಡಿ ಅತ್ಯಾಚಾರ ನಡೆಸಲು ಮುಂದಾದ. ಆಗ ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಕಿರುಚಿಕೊಂಡಾಗ ಪ್ರವೀಣ್ ಬಳಿಯಿಂದ ಟವೆಲ್ನಿಂದ ಆಕೆ ಬಾಯಿಗೆ ತುರುಕಿ ಕಿರುಚಿಕೊಂಡರೆ ನಿನ್ನನ್ನು ಕತ್ತು ಹಿಸುಕಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅದೇ ಸಮಯದಲ್ಲಿ ಆತನ ಬೆರಳನ್ನು ಕಚ್ಚಿ ತಪ್ಪಿಸಿಕೊಂಡು ಬಂದಿರುವುದಾಗಿ ರಮೇಶ್ಬಾಬು ಅವರ ಪತ್ನಿ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶರನ್ನವರಾತ್ರಿ ಕಾರ್ಯಕ್ರಮ
ಮಾಲೂರು: ಶಂಕರ ಸೇವಾ ಸಮತಿಯಿಂದ ಪಟ್ಟಣದ ಶಂಕರನಾರಾಯಣ ಸ್ವಾಮಿ ದೇವಾಲಯದಲ್ಲಿ ಒಂದು ವಾರದ ಶರನ್ನವರಾತ್ರಿ ಕಾರ್ಯಕ್ರಮ ನಡೆಯಲಿದೆ. ಶರನ್ನವರಾತ್ರಿಯ ಒಂದು ವಾರದ ಕಾರ್ಯಕ್ರಮದಲ್ಲಿ ಪ್ರತಿ ದಿನ ಬೆಳಿಗ್ಗೆ ದೇವರಿಗೆ ಅಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಪ್ರತಿ ಸಂಜೆ ಸೌಂದರ್ಯ ಲಹರಿ ಸಂಚಾಲನಾ ಸಮಿತಿರವರಿಂದ ಶ್ಲೋಕ ಸಮರ್ಪಣೆ ನಡೆಯಲಿದೆ. ವಾರದ ಈ ಎಲ್ಲ ಕಾರ್ಯಕ್ರಮದಲ್ಲಿ ಅಸ್ತಿಕರು ಭಾಗವಹಿಸಿ ಶ್ರೀ ದೇವಿ ಕೃಪಗೆ ಪಾತ್ರರಾಗಬೇಕೆಂದು ಸಮಿತಿ ಪ್ರಕಟನೆಯಲ್ಲಿ ಮನವಿ ಮಾಡಿದೆ.
ಸತ್ಯಾಗ್ರಹವೇ ಆಯುಧ
ಚಿಂತಾಮಣಿ: ಅಹಿಂಸೆಯೇ ಮಾರ್ಗವಾಗಿ, ಸತ್ಯಾಗ್ರಹವೇ ಆಯುಧವಾಗಿ ನಡೆದು ಬಂದ ಮಹಾನ್ ಮಾನವತವಾದಿ ಮಹಾತ್ಮ ಗಾಂಧೀಜಿ ಎಂದು ಪ್ರಾಂಶುಪಾಲ ವಿ. ನಾರಾಯಣಸ್ವಾಮಿ ಕರೆ ನೀಡಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಜಯಂತಿಗೆ ಚಾಲನೆ ನೀಡಿ ಮಾತನಾಡಿ, ಇಂದಿನ ಯುವ ಪೀಳಿಗೆ ಆದರ್ಶ ವ್ಯಕ್ತಿಗಳಾಗಿ ಜೀವಿಸಲು ಕರೆ ನೀಡಿದರು. ಮುಖ್ಯ ಶಿಕ್ಷಕ ಕೆ. ಓಬಯ್ಯ ಮಾತನಾಡಿ, ದೇಶದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಿದ ಗಾಂಧೀಜಿ ನಡೆದ ದಾರಿ ಆದರ್ಶವಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಕೌಶಲ್ಯ ವೃದ್ಧಿ ಹಾಗೂ ಜೀವನಾಧಾರ ಕಲಿಕೆಗೆ ಪ್ರೋತ್ಸಾಹವಾಗಲು ಹೊಲಿಗೆ ಶಿಕ್ಷಣ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಡಿಡಿಪಿಐ ಸೈಹಿದಾ ಬೇಗಂ ಹೇಳಿದರು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement