ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಯುವಕರಿಗೆ ಗಾಂಧೀಜಿ ವಿಚಾರಧಾರೆ ಅಗತ್ಯ'

Rashmi Kasaragodu
Updated On : 4 Oct 2013, 12:30 pm

ಗುಡಿಬಂಡೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೋಲಾರದ ನೆಹರು ಯುವಕೇಂದ್ರ ಹಾಗೂ ಸ್ಥಳೀಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಅಂಗವಾಗಿ ಯುವಜನತೆಗೆ ಗಾಂಧೀಜಿ ವಿಚಾರಧಾರೆ ಮತ್ತು ಗ್ರಾಮ ಸ್ವರಾಜ್ಯ ಎಂಬ ವಿಚಾರಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರಕ್ಷಕ ವೃತ್ತ ನಿರಕ್ಷಕ ಶಿವಕುಮಾರ್ ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ತಳಹದಿಯಲ್ಲಿ ನೆಲೆಸಿರುವ ಭಾರತದಂತಹ ದೊಡ್ಡ ರಾಷ್ಟ್ರಗಳಲ್ಲಿ ಯಶಸ್ವಿ ಸಾಧಿಸಲು ಗಾಂಧಿ ತತ್ವಗಳು ಪ್ರಬಲ ಅಸ್ತ್ರವಾಗಿದ್ದು ಇಂದಿನ ಯುವಜನತೆ ಗಾಂಧೀಜಿಯವರ ವಿಚಾರಧಾರೆಯನ್ನು ಅರಿತು ಉನ್ನತಿಯನ್ನು ಸಾಧಿಸಬೇಕು. ಜೊತೆಗೆ ರಾಷ್ಟ್ರವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿದ್ದು ರಾಷ್ಟ್ರ ಕಂಡ ಶ್ರೇಷ್ಠ  ವ್ಯಕ್ತಿಗಳ ಮೌಲ್ಯಾಧಾರಿತ ಜೀವವನ್ನು ಅನುಸರಿಸ ಬೇಕೆಂದರು.
ವಕೀಲ ಜಿ.ವಿ. ವಿಶ್ವನಾಥ್, ಗಾಂಧಿವಾದ ರಾಷ್ಟ್ರದ ಉನ್ನತಿಗೆ ಅಮೂಲ್ಯವಾದಂತಹ ಸಾಧನವಾಗಿದೆ. ಅವರ ಗ್ರಾಮ ಸ್ವರಾಜ್ಯ ಕಲ್ಪನೆ ನವಭಾರತದ ನಿರ್ಮಾಣದಲ್ಲಿ ಪ್ರಬಲ ಶಕ್ತಿವಂತ ಸಿದ್ಧಾಂತಗಳಾಗಿದ್ದು ಇಂದಿನ ಯುವಜನತೆ ಈ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಎಲ್. ವಿಜಯ್ ಗಾಂಧಿ ವಿಚಾರಧಾರೆ ಕಾರ್ಯಕ್ರಮ ಯುವಜನತೆ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದು ಆಯೋಜಕರನ್ನು ಅಭಿನಂದಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಗಾಂಧಿವಾದದ ವಿಚಾರವಾದ ಶಾಂತಿ, ಅಹಿಂಸೆ ಮಹತ್ವದ ಮಾರ್ಗದಲ್ಲಿ ಯುವ ಜನತೆ ಮುನ್ನಡೆದು ದೀನದಲಿತರ ಸೇವೆಯಲ್ಲಿ ತೊಡಗಿಕೊಂಡು ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸೇವೆ ಮಾಡಿದರೇ ಭಗವಂತ ನಮ್ಮನ್ನು ಮೆಚ್ಚುತ್ತಾನೆ ಎಂಬ ನಂಬಿಕೆ ಗಾಂಧೀಜಿಯವರದ್ದಾಗಿತ್ತು ಎಂದು  ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಯುವಜನರಿಗೆ ಆಯೋಜಿಸಿದ್ದ ಪ್ರಬಂಧ, ಭಾಷಣ ಮತ್ತು ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಗೌತಮಿ, ಗಜೇಂದ್ರ ಸಮಗ್ರ ಬಹುಮಾನಗಳನ್ನು ಪಡೆದುಕೊಂಡರು.
ಉಪನ್ಯಾಸಕರಾದ ಎಸ್.ಎಂ. ಕೃಷ್ಣಮೂರ್ತಿ, ವರದರಾಜನ್, ಬಿಜೆ. ರಾಮಣ್ಣ, ನಿಮಿತ, ಶೇಷಕುಮಾರ್, ಹೆಚ್.ಆರ್. ಸುರೇಶ್, ಬಿ. ಮಂಜುನಾಥ್, ಎನ್.ವೈ.ಸಿ ಮಂಜುನಾಥ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement