ಲಕ್ಷ್ಮೀಸಾಗರ ಕೆರೆ ಅಭಿವೃದ್ಧಿಗೆ ರು. 5 ಲಕ್ಷ
ಟೇಕಲ್: ರು. 5 ಲಕ್ಷ ಅಂದಾಜು ವೆಚ್ಚದಲ್ಲಿ ಎನ್ಆರ್ಇಜಿ ಕಾರ್ಯಕ್ರಮದಡಿ ಲಕ್ಷ್ಮೀಸಾಗರ ಕೆರೆ ಅಭಿವೃದ್ಧಿ ಪಡಿಸುತ್ತಿರುವುದಾಗಿ ಕೆ.ಜಿ. ಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ರಮೇಶ್ ತಿಳಿಸಿದರು. ಸಮೀಪದ ಲಕ್ಷ್ಮೀಸಾಗರ ಕೆರೆ ಅಭಿವೃದ್ಧಿ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಪಂ ಸದಸ್ಯ ಮುನಿಯಪ್ಪ ಅಧ್ಯಕ್ಷರನ್ನು ಅಭಿನಂದಿಸಿದರು. ತಾಪಂ ಸದಸ್ಯೆ ಮಂಜುಳಾ ವೆಂಕಟೇಶ್, ಗ್ರಾಪಂ ಸದಸ್ಯೆಯರಾದ ಆರ್. ಮಂಜುಳಾ, ಶಾಂತಮ್ಮ, ಪದ್ಮನಾಭಯ್ಯ, ಪಿಡಿಒ ಗೋವಿಂದೆಗೌಡ, ಕಾರ್ಯದರ್ಶಿ ಎಂ. ಗೋಪಾಲ್ ಇದ್ದರು.