ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿವಿಧಡೆ ವಿಜೃಂಭಣೆಯ ಗಾಂಧಿ ಜಯಂತಿ

Rashmi Kasaragodu
Updated On : 4 Oct 2013, 12:26 pm

ಮಾಲೂರು: ಗಾಂಧಿ ಜಯಂತಿಯನ್ನು ತಾಲೂಕಿನ ವಿವಿಧಡೆ ವಿಜೃಂಭಣೆಯಿಂದ ಆಚರಿಸಲಾಯಿತು.
ಹೆಡಗಿನ ಬೆಲೆ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಮೀಪದ ಯುಕ್ವೇನ್ ಇಂಡಿಯಾ ಕಂಪನಿ ಸಹಕಾರದಲ್ಲಿ ಗಾಂಧಿ ಜನ್ಮದಿನಾಚರಣೆಯನ್ನು  ಶಾಲೆಗೆ ಅವಶ್ಯವಿರುವ ಪೀಠೋಪಕರಣ ವಿತರಿಸುವ ಮೂಲಕ ಆಚರಿಸಲಾಯಿತು.
ಜಿಪಂ ಸದಸ್ಯ ರಾಮಸ್ವಾಮಿರೆಡ್ಡಿ ಮಾತನಾಡಿದರು. ಯುಕ್ವೇನ್ ಇಂಡಿಯಾ ಕಂಪನಿ ವ್ಯವಸ್ಥಾಪಕ ವಿಕ್ರಮ್ ರಾಜಗೋಪಾಲನ್, ಸಹಾಯಕ ವ್ಯವಸ್ಥಾಪಕ ಅನಂತಕೃಷ್ಣಾಚಾರಿ ಶಾಲೆಗೆ 30 ಬೆಂಚು ಮತ್ತು 10 ಡೆಸ್ಕ್ ನೀಡಿದರು. ಪಂಚಾಯ್ತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ನಾಗೇಶ್, ಮುನಿಶಾಮಪ್ಪ, ಮಾರಪ್ಪ, ವೈ. ನಾರಾಯಣಸ್ವಾಮಿ, ಚೆನ್ನಕೃಷ್ಣ, ಸಿಆರ್ಪಿ ಸೋಮಶೇಖರ್, ವಿಜಿ ಕುಮಾರ್ ಇದ್ದರು.
ಲಕ್ಕೂರು: ಸರ್ಕಾರಿ ಕಾಲೇಜಿನಲ್ಲಿ ಗಾಂದಿ ಜಯಂತಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿರವರ ಜನ್ಮದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಾನ್ಯಾಸಕ ನಾರಾಯಣರೆಡ್ಡಿ, ಉಪ ಪ್ರಾಂಶುಪಾಲೆ ಭವ್ಯ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ರಾಜಮ್ಮ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯರಾದ ರಾಜಣ್ಣ, ಶ್ಯಾಂ, ಉಪನ್ಯಾಸಕ ಪುಪ್ಬಲತಾ, ಪ್ರೇಮಲತಾ, ರಶ್ಮಿ, ದೇವರಾಜ್, ಹನುಮಂತಪ್ಪ, ಶಿಕ್ಷಕರಾದ ಜ.ಮು. ಚಂದ್ರ, ಹೇಮಾವತಿ, ಸುರೇಶ್ ಜಕಾತಿ, ಬಸಪ್ಪ ನೇತಿ, ಪುರುಷೋತ್ತಮ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement