ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ

Rashmi Kasaragodu
Updated On : 4 Oct 2013, 12:24 pm

ಚಿಂತಾಮಣಿ: ಹಿರಿಯ ನಾಗರಿಕರು ಸಮಾಜಕ್ಕೆ ಮಾರ್ಗದಕರಾಗಿರಬೇಕೆಂದು ನಿವೃತ್ತ ಡಿಡಿಪಿಐ ವೆಂಕಟಸ್ವಾಮಿ ಹೇಳಿದರು. ತಾಲೂಕು ನಿವೃತ್ತ ನೌಕರರ ಸಂಘ ಹಾಗೂ ಹಿರಿಯ ನಾಗರಿಕರ ವೇದಿಕೆಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿ, ಹಿರಿಯರಾದವರು ಸಮಾಜವನ್ನು ತಿದ್ದುವುದರ ಜೊತೆಗೆ ಇತರರಿಗೆ ಆದರ್ಶವಾಗಿಯೂ ಇರಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿ. ವೆಂಕಟರತ್ನಂ ಮಾತನಾಡಿ, ಹಿರಿಯ ನಾಗರಿಕರ ಬೇಡಿಕೆಗಳಿಗೆ ಮಾನ್ಯತೆ ದೊರೆತಿಲ್ಲ. ಆಡಳಿತಗಾರರು ಭಾಷಣಗಳಲ್ಲಿ ಮಾತ್ರ ಹಿರಿಯ ಚೇತನಗಳ ಕ್ಷೇಮಾಭಿವೃದ್ಧಿಯ ಕುರಿತು ಬಣ್ಣದ ಮಾತುಗಳನ್ನು ಆಡುತ್ತಿದ್ದಾರೆ ಎಂದು ದೂರಿದರು. ಯೋಗ ಶಿಕ್ಷಕ ಜಯರಾಮರೆಡ್ಡಿ, ಹಿರಿಯರ ನಾಗರಿಕರ ವೇದಿಕೆ ಅಧ್ಯಕ್ಷ ಅಪ್ಪಾಜಿರೆಡ್ಡಿ, ಸುಬ್ರಮಣ್ಯಂಸೇಟ್, ವೀರಪ್ಪರೆಡ್ಡಿ, ನಿವೃತ್ತ ಶಾಲಾ ತನಿಖಾಧಿಕಾರಿ ವೆಂಕಟರವಣ, ಹನುಮಂತಪ್ಪ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement