ಕಳಪೆ ಕಾಮಗಾರಿ: ತಾಪಂ ಅಧ್ಯಕ್ಷರ ಆರೋಪ
ಶಿಡ್ಲಘಟ್ಟ: ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಂತರ ರು.ಗಳನ್ನು ಖರ್ಚು ಮಾಡಿದ್ದರು ಇಲಾಖಾಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿ ನಡೆಸಿರುವ ಅಂಶ ಬೆಳಕಿಗೆ ಬಂದಿದೆ.
ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು ರು. 1.60 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾಲಕಿಯರ ವಸತಿ ನಿಲಯದ ಕಾಮಗಾರಿ ಕಳಪೆಯಿಂದ ನಡೆಸುತ್ತಿರುವ ಅಂಶವನ್ನು ತಾಪಂ ಅಧ್ಯಕ್ಷ ಯರ್ರಬಚ್ಚಪ್ಪ ಬೆಳಕಿಗೆ ತಂದಿದ್ದಾರೆ. ಕಟ್ಟಡ ನಿರ್ಮಿಸಲು ಜಲ್ಲಿ ಕಲ್ಲುಗಳ್ನು ಪಾಯ ಹಾಕುತ್ತಿದ್ದು ಇದರಿಂದ ಕಟ್ಟಡದ ಭದ್ರತೆ ವಿಚಾರದಲ್ಲಿ ಅಪಸ್ವರ ಕೇಳಿ ಬರುತ್ತಿದೆ. ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಆದೇಶ ನೀಡುವುದು ಸಾಮಾನ್ಯ. ಆದರೇ ಕಟ್ಟಡದ ಕಾಮಗಾರಿಯ ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಪಾಯ ತೋಡಲು ಕಳಪೆ ಮಟ್ಟದ ಕಲ್ಲುಗಳನ್ನು ಬಳಸಿರುವುದು ಕಂಡುಬಂದಿದ್ದು ಈ ಕುರಿತು ಇಲಾಖೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕೆಂದು ತಾಪಂ ಅಧ್ಯಕ್ಷ ಯರ್ರಬಚ್ಚಪ್ಪ ಆಗ್ರಹಿಸಿದ್ದಾರೆ. ತಾಪಂ ಸದಸ್ಯ ನರಸಿಂಹಮೂರ್ತಿ ಇದ್ದರು.