ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಗೌರಿಬಿದನೂರು: ಮಹಾತ್ಮರ ತತ್ವ ಹಾಗೂ ಆದರ್ಶ ಅಳವಡಿಸಿಕೊಳ್ಳಬೇಕಿದೆ ಎಂದು ಗ್ರಾಪಂ ಅಧ್ಯಕ್ಷ ಉಮಾಶಂಕರ್ ತಿಳಿಸಿದರು.
ಮಂಚೇನಹಳ್ಳಿ ಹೋಬಳಿಯ ಚೀಲೇನಹಳ್ಳಿ ಗ್ರಾಮದ ಪುರಾತನ ನೆರ್ಲಹಳ್ಳಿ ಕೆರೆ ಅಂಗಳದಲ್ಲಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಕೆರೆ ಅಭಿವೃದ್ಧಿ ಕಾಮಗಾರಿಗೆ 2013-2014 ನೇ ಸಾಲಿನ ಖಾತ್ರಿ ಯೋಜನೆಯಡಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ ಎಂದರು. ಪಿಡಿಒ ನರಸಿಂಹಪ್ಪ, ಕಾರ್ಯದರ್ಶಿ ಕೃಷ್ಣಪ್ಪ, ಗ್ರಾಪಂ ಸದಸ್ಯ ಮುತ್ತೇಗೌಡ, ಗಂಗಾಧರಪ್ಪ, ಲಕ್ಷ್ಮಿನಾರಯಣಪ್ಪ, ಬೊಮ್ಮರಾಜು, ಕಾಮರೆಡ್ಡಿ, ಪಾಪಣ್ಣ, ಚೀಲೇನಹಳ್ಳಿ ಸುಬಾನ್ ಇದ್ದರು.