ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆರೆಗಳ ಪುನಶ್ಚೇತನ ಕಾರ್ಯಕ್ರಮ

Rashmi Kasaragodu
Updated On : 5 Oct 2013, 12:37 pm

ಗೌರಿಬಿದನೂರು: 2013-14ಸಾಲಿನ ಖಾತ್ರಿ ಅಭಿವೃದ್ಧಿ ಯೋಜನೆಯಡಿ 22ಲಕ್ಷ ವೆಚ್ಚದಲ್ಲಿ ಕೆರೆಗಳ ಪುನಶ್ಚೇತನ ಕಾಮಗಾರಿಗೆ ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಚಾಲನೆ ನೀಡಿದರು.
ತಾಲೂಕಿನ ಅಲಕಾಪುರ ಕೆರೆ ಅಂಗಳದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತಾಲೂಕಿನಾದ್ಯಂತ 8 ಗ್ರಾಪಂಗಳ ಕೆರೆಗಳ ಹೂಳು ಎತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಗಾಂಧೀಜಿಯವರ ಕನಸಿನ ಕೂಸಾದ ಕೆರೆಗಳ ಪುನಶ್ಚೇತನ ಕಾಮಗಾರಿಗೆ ಮುಖ್ಯಮಂತ್ರಿಗಳು ರಾಜ್ಯಾದ್ಯಂತ 12ಸಾವಿರ ಕೆರೆಗಳಿಗೆ ಗುದ್ದಲಿ ಪೂಜೆ ನೆಡೆಸಲಾಗುತ್ತಿದೆಯೆಂದು ತಿಳಿಸಿದರು.
ತಾಪಂ ಕಾರ್ಯನಿರ್ವಣಾಧಿಕಾರಿ ರೆಡ್ಡೆಪ್ಪ ಯೋಜನೆಯ ಬಗ್ಗೆ ಪರಿಚಯಿಸಿದರು. ಜಿಪಂ ಲೆಕ್ಕಾಧಿಕಾರಿ ಓಂಕಾರಪ್ಪ, ಜಿಪಂ ಸದಸ್ಯರು, ತಾಪಂ ಸದ್ಯಸರು ಇದ್ದರು.

ರೈತ ಮಹಿಳೆಯರು ಮೈಸೂರಿನ ಸಿಎಫ್ಟಿಆರ್ಐಗೆ ಭೇಟಿ

ಗೌರಿಬಿದನುರು: ತಾಲೂಕಿನ ಕಾಚಮಾಚೇನಳ್ಳಿಯ ರೈತಮಹಿಳೆಯರನ್ನು ಡೆನ್ಮಾರ್ಕ್ ಮೂಲದ ಕೆಮಿನೋವಾ ಸಂಸ್ಥೆ ಸಹೇಲಿ ಯೋಜನೆಯಡಿ ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ (ಸಿಎಫ್ಟಿಆರ್ಐ)ಮೈಸೂರು ಕ್ಷೇತ್ರ ಭೇಟಿಗಾಗಿ 28 ಜನ ರೈತ ಮಹಿಳೆಯರನ್ನು ಕರೆದೊಯ್ದು ಸಂಶೋಧನೆ ನಡೆಸಿದೆ ಎಂದರು.
ಇಲ್ಲಿ ಮಹಿಳೆಯರು ನೋಡಿದ ಅನೇಕ ವಿಷಯಗಳಲ್ಲಿ ಪ್ರಮುಖವಾಗಿ ಕಿರುದಾನ್ಯ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡುವ ಮಾಹಿತಿ,  ಸಂಸ್ಕರಣೆಗೆ ಬೇಕಾದ ಯಂತ್ರಗಳು ಅವುಗಳ ಉಪಯೋಗಗಳು, ಹಣ್ಣು ಮತ್ತು ತರಕಾರಿ ಸಂಸ್ಕರಣಾವಿಭಾಗ, ಪ್ರೊಟೀನ್ ಹಾಗೂ ಇತರೆ ಅವಶ್ಯಕ ಪೋಶಕಾಂಶಗಳ ಗಣಿಯಾದ ಸ್ಪಿರುಲಿನ ಎಂಬ ಆಹಾರವನ್ನು ಗ್ರಾಮೀಣ ಭಾಗದಲ್ಲಿ ಬೆಳೆಸುವ ಬಗ್ಗೆ ಮಾಹಿತಿ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement