ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೇಳುವವರ್ಯಾರು ರಾಜ್ಯ ಹೆದ್ದಾರಿ ದುಸ್ಥಿತಿ?

Rashmi Kasaragodu
Updated On : 5 Oct 2013, 12:34 pm

ಟೇಕಲ್: ಹೊಸಕೋಟೆಯಿಂದ ಮಾಲೂರು- ಟೇಕಲ್- ಬಂಗಾರಪೇಟೆ ನಂತರ ವಿ. ಕೋಟೆವರೆಗೂ ರಾಜ್ಯ ಹೆದ್ದಾರಿ 8 ವರ್ಷಗಳ ಹಿಂದೆ ಮಂಜೂರಾಗಿದ್ದು, ರಾಜ್ಯ ಹೆದ್ದಾರಿ ಸಂಖ್ಯೆ 92 ಎಂದು ನಮೂದಿಸಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಈ ಹೆದ್ದಾರಿಯನ್ನು ದುರಸ್ತಿ ಮಾಡುವಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಸರ್ಕಾರ ಮರೆತಂತಿದೆ.
ಹೊಸಕೋಟೆಯಿಂದ ಮಾಲೂರು ವರೆಗಿನ ರಸ್ತೆ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡು ನಿರ್ಮಿಸಲಾಯಿತು, ನಂತರ ಮಾಲೂರಿನಿಂದ ಕೊಂಡಶೆಟ್ಟಹಳ್ಳಿವರೆಗೂ, ಬಂಗಾರಪೇಟೆ ಗಡಿ ರಾಮಪುರದಿಂದ ಕೆಜಿಎಫ್ ವರೆಗಿನ ರಸ್ತೆಗಳು ಬಹುತೇಕ ದುರಸ್ತಿಗೊಂಡಿದ್ದು ಮಾಲೂರು ತಾಲೂಕಿನ ಟೇಕಲ್ನಿಂದ ಬಂಗಾರಪೇಟೆ ಗಡಿಯ ಯಲವಹಳ್ಳಿ ಗ್ರಾಮದವರೆಗೂ ರಸ್ತೆಯು ದುರಸ್ತಿಯಾಗದೆ ದಿನನಿತ್ಯ ಇಲ್ಲಿ ಸಂಚರಿಸುವ ವಾಹನಗಳಿಗೂ ನರಕಯಾತನೆ ಕಾಣುವಂತಾಗಿದೆ. ಮಾಲೂರು- ಟೇಕಲ್- ಬಂಗಾರಪೇಟೆ ರಸ್ತೆ ಪ್ಯಾಕೇಜ್ಗೆ ಸೇರಿ 5 ವರ್ಷಗಳಾದರೂ ರಸ್ತೆ ಪೂರ್ಣಗೊಳ್ಳದೆ ಮಳೆ ಬಂದರೆ ಓಡಾಡುವುದೇ ಕಷ್ಟವಾಗುತ್ತದೆ. ರಾಜ್ಯ ಹೆದ್ದಾರಿ ಎಂದೆ ಬಿಂಬಿಸಿರುವ ರಸ್ತೆ ಹದಗೆಟ್ಟಿದೆ.
ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾತನೆಯಾಗಿದ್ದು ಹಲವಾರು ಸಂದರ್ಭಗಳಲ್ಲಿ ಮುಗ್ಗಿರಿಸಿ ಬಿದ್ದು ಕೈಕಾಲು ಮುರಿದು ಕೊಂಡಿದ್ದು ಉಂಟು. ಈ ಬಗ್ಗೆ ಇಲಾಖೆಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ. ಮಾಲೂರು ಶಾಸಕ ಮಂಜುನಾಥಗೌಡರು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ಆದಷ್ಟೂ ಬೇಗ ಟೇಕಲ್ನಿಂದ ಕೆ.ಜಿ. ಹಳ್ಳಿ, ಮಿಟ್ಟಿಗಾನಹಳ್ಳಿ, ಶ್ರೀಕಂಠಪುರ, ಬೆಟ್ಟಹಳ್ಳಿ, ಯಲುವಹಳ್ಳಿಯವರೆಗಿನ ರಸ್ತೆಯನ್ನು ಸರಿಪಡಿಸಿಕೊಡುತ್ತಾರೆಂದು ಇಲ್ಲಿನ ಜನತೆ ಎದುರು ನೋಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement